ಮಂಗಳೂರು:ನಗರದ ಕಾಲೇಜು ವಿದ್ಯಾರ್ಥಿಗಳ ನಡುವೆ ರಾತ್ರಿ ಹೊಡೆದಾಟ ನಡೆದಿದ್ದು, ಎರಡು ಗುಂಪಿನ 9 ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಆದಿತ್ಯ, ಮುಹಮ್ಮದ್, ಕೆನ್ ಜಾನ್ಸನ್, ವಿಮಲ್, ಅಬ್ದುಲ್ ಶಾಹಿದ್, ಅಬುತಹರ್, ಫಹದ್, ಮುಹಮ್ಮದ್ ನಾಸಿಫ್ ಮತ್ತು ಆದರ್ಶ ಬಂಧಿತರು.

ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತ ಅಭಿರಾಮಿನನ್ನು ಭೇಟಿ ಮಾಡಿ, ಮಾತನಾಡಿಸುವ ವೇಳೆ ಸಿನಾನ್ ಎಂಬಾತ ಇತರ 8 ಜನರೊಂದಿಗೆ ಬಂದು ಇಂಟರ್ ಲಾಕ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಆದರ್ಶ ಮತ್ತು ಮೊಹಮ್ಮದ್ ನಸೀಫ್ ಎಂಬವರಿಗೆ ಗಾಯವಾಗಿದೆ. ಜತೆಗೆ ಗಲಾಟೆ ಬಿಡಿಸಲು ಬಂದ ಶನಿನ್ ಮತ್ತು ಶ್ರವಣ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆದರ್ಶ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ಬಂಧಿಸಲು ಪೊಲೀಸರು ಗುಜ್ಜರಕೆರೆ ಬಳಿ ಇರುವ ಹಾಸ್ಟೆಲ್ಗೆ ತೆರಳಿದ್ದಾರೆ. ಈ ವೇಳೆ ತಮ್ಮನ್ನು ಬಂಧಿಸದಂತೆ ಕೆಲವರು ತಡೆದು ಕುರ್ಚಿ, ಕಲ್ಲು ಮತ್ತು ಇತರ ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಇದರಿಂದಾಗಿ ಕೆಲವು ಪೊಲೀಸರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ: ಹೆಸ್ಕಾಂ ಸಿ ದರ್ಜೆ ನೌಕರ ನಾತಾಜಿ ಪಾಟೀಲ ಅಮಾನತು