ಕರ್ನಾಟಕ

karnataka

ETV Bharat / city

ಬ್ಯಾಂಕ್​ ಖಾತೆಗೆ ಕನ್ನ: ಲಕ್ಷಾಂತರ ರೂ. ದೋಚಿದ ಖದೀಮರು - customer's bank account

ಖದೀಮರು ಗ್ರಾಹಕರ ಬ್ಯಾಂಕ್​ ಖಾತೆಯಿಂದ 1,70,600 ರೂ. ವಂಚಿಸಿದ್ದು, ಈ ಸಂಬಂಧ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ.

police
police

By

Published : Jan 4, 2021, 12:42 PM IST

ಮಂಗಳೂರು: ಗ್ರಾಹಕರ ಗಮನಕ್ಕೆ ಬಾರದೇ ಖದೀಮರು ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕುರಿತು ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಲ್ ಬಾಗ್ ಶಾಖೆಯಲ್ಲಿ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದ ವ್ಯಕ್ತಿಯೊಬ್ಬರ ಅಕೌಂಟ್​ನಿಂದ ಅವರ ಗಮನಕ್ಕೆ ಬಾರದೇ ಹಣ ತೆಗೆಯಲಾಗಿದೆ. ಇವರ ಖಾತೆಯಿಂದ ಹಂತ ಹಂತವಾಗಿ 90,600 ರೂಪಾಯಿ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕೆನರಾ ಬ್ಯಾಂಕ್​ನ ಕಾವೂರು ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದ ಮತ್ತೋರ್ವ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಸಹ ಹಣ ತೆಗೆಯಲಾಗಿದೆ. ಇವರ ಖಾತೆಯಿಂದ 80 ಸಾವಿರ ರೂ. ಡ್ರಾ ಮಾಡಲಾಗಿದೆಯಂತೆ.

ಇನ್ನು ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 1,70,600 ರೂ. ವಂಚನೆ ನಡೆದಿದ್ದು, ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details