ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಸಸಿಕಾಂತ್ ಸೆಂಥಿಲ್ ಅವರನ್ನು ಮೂರು ದಿನಗಳ ಹಿಂದೆ ಭೇಟಿಯಾಗಿದ್ದೆ. ಆಗ ಅವರು ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ 370 ವಿಧಿ ರದ್ಧತಿ ಬಳಿಕ ನಡೆದ ಬೆಳವಣಿಗೆ, ಆರ್ಬಿಐನಿಂದ ಮೀಸಲು ನಿಧಿ ತೆಗೆದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
370 ರದ್ಧತಿ, ಆರ್ಬಿಐನಿಂದ ಮೀಸಲು ನಿಧಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಾ ಸಸಿಕಾಂತ್ ಸೆಂಥಿಲ್? - submitted his resign letter
ಸಸಿಕಾಂತ್ ಸೆಂಥಿಲ್ ಅವರು ಜಮ್ಮು-ಕಾಶ್ಮೀರದ 370 ವಿಧಿ ರದ್ಧತಿ ಬಳಿಕ ನಡೆದ ಬೆಳವಣಿಗೆ, ಆರ್ಬಿಐನಿಂದ ಮೀಸಲು ನಿಧಿ ತೆಗೆದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರೊಂದಿಗೆ ಮಾತನಾಡಲು ಹೋಗಿದ್ದೆ. ಆಗ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಕಾಶ್ಮೀರದಲ್ಲಿ ಎಲ್ಲಾ ವ್ಯವಸ್ಥೆಯನ್ನೂ ಬಂದ್ ಮಾಡಲಾಗಿತ್ತು. ಆರ್ಬಿಐನಿಂದ ₹ 1,76,501 ಕೋಟಿ ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವುದರ ಬಗ್ಗೆ ಹೇಳಿದ್ದರು ಎಂದರು.
ಸೆಂಥಿಲ್ ಅವರು ತಮ್ಮ ರಾಜೀನಾಮೆ ವಾಪಾಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಖಾದರ್, ಪ್ರಸ್ತುತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ಅಸಾಧ್ಯವಾದರೆ ಅವರು ಒಂದೆರಡು ವರ್ಷ ರಜೆ ತೆಗೆದುಕೊಂಡು ಮತ್ತೆ ವಾಪಸಾಗಲಿ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ ಎಂದರು.