ಮಂಗಳೂರು: ಆಯಾಯ ಪ್ರದೇಶಕ್ಕೆ ತಕ್ಕಂತೆ ಜನರಲ್ಲಿ ಜಾಗೃತಿ ಮೂಡಿಸಿದರೆ ಪರಿಣಾಮಕಾರಿಯಾಗಿರುತ್ತೆ ಅನ್ನೋ ಒಂದು ಮಾತಿದೆ. ಕರಾವಳಿಯ ಪ್ರಮುಖ ಕಲೆ ಯಕ್ಷಗಾನ ಕರಾವಳಿಯ ಜನರನ್ನು ಆಕರ್ಷಿಸುತ್ತದೆ.
ವೋಟು ಬಂತು ವೋಟು ಬಂತು ಡೆನ್ನ ಡೆನ್ನನ... ಪಟ್ಲ ಸತೀಶ್ ಶೆಟ್ಟಿ ಕಂಠದಲ್ಲಿ ಚುನಾವಣಾ ಜಾಗೃತಿ ಸಾಂಗ್ - ಪಟ್ಲ ಸತೀಶ್ ಶೆಟ್ಟಿ
ಚುನಾವಣಾ ಜಾಗೃತಿ ಮೂಡಿಸಲು ನಾನಾ ಕಸರತ್ತು ನಡೆಸಿ ಜಾಗೃತಿ ಮೂಡಿಸುವಲ್ಲಿ ಮಂಗಳೂರು ಒಂದಡಿ ಮುಂದಿಟ್ಟಿದೆ. ಕರಾವಳಿಯ ಪ್ರಮುಖ ಕಲೆ ಯಕ್ಷಗಾನದ ಹಾಡಿನ ಧಾಟಿಯಲ್ಲಿ ಚುನಾವಣಾ ಜಾಗೃತಿ ಪ್ರಚಾರ ಆರಂಭಿಸಿದೆ.
ಯಕ್ಷಗಾನದಲ್ಲಿ ಬರುವ ಭಾಗವತಿಕೆ ಹಾಡನ್ನು ಚುನಾವಣಾ ಜಾಗೃತಿಗೆ ಬಳಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಚುನಾವಣಾ ಜಾಗೃತಿ ಮೂಡಿಸಲು ದ.ಕ ಜಿಲ್ಲಾ ಸ್ವೀಪ್ ಸಮಿತಿ ಮುಂದಾಗಿದೆ. ಯಕ್ಷಗಾನದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ ಹಾಡಿಗೆ ಮನಸೋಲದವರಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಪಟ್ಲ ಸತೀಶ್ ಶೆಟ್ಟಿ ಅವರ ಮೂಲಕ ಹಾಡನ್ನು ಹಾಡಿಸಿ ಚುನಾವಣಾ ಜಾಗೃತಿ ಪ್ರಚಾರ ಆರಂಭಿಸಿದೆ.
ವೋಟು ಬಂತು ವೋಟು ಬಂತು ಡೆನ್ನ ಡೆನ್ನನ ಎಂಬ ಮೂರೂವರೆ ನಿಮಿಷದ ಹಾಡನ್ನು ಸಿದ್ಧಪಡಿಸಲಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಸುಮಧುರ ಕಂಠದಲ್ಲಿ ಈ ಹಾಡು ಇದೀಗ ಪ್ರಚಾರಕ್ಕೆ ಸಜ್ಜಾಗಿದೆ. ಹಾಡಿನ ರಚನೆಯನ್ನು ನವನೀತ ಶೆಟ್ಟಿ ಕದ್ರಿ ಮಾಡಿದ್ದಾರೆ.