ಮಂಗಳೂರು: 1837ರಲ್ಲಿ ಮಂಗಳೂರು ಕ್ರಾಂತಿ ದಂಗೆಯ ಮೂಲಕ ಕೆದಂಬಾಡಿ ರಾಮಯ್ಯ ಗೌಡ ನೇತೃತ್ವದ ದಂಡು ಬ್ರಿಟಿಷ್ ಸೇನೆಯನ್ನು ಹಿಮ್ಮೆಟ್ಟಿಸಿತು. ಈ ವಿಚಾರ ಇತಿಹಾಸದಲ್ಲಿ ಉಲ್ಲೇಖವಾಗಿಲ್ಲ ಎಂದಾದರೆ ದೇಶದ ಸ್ವಾತಂತ್ರ್ಯದ ಇತಿಹಾಸವೇ ಪೂರ್ತಿಯಾಗದಂತೆ ಎಂದು ಮಾಜಿ ಮುಖ್ಯಮಂತ್ರಿ ಸಿಎಂ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾವುಟಗುಡ್ಡೆ ಠಾಗೋರ್ ಪಾರ್ಕ್ನಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಅನಾವರಣಕ್ಕೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚರಿತ್ರೆಗಳಲ್ಲಿ ಕೆಲವೊಂದು ವಿಚಾರಗಳು ದಾಖಲಾಗುವುದೇ ಇಲ್ಲ. ಮಂಗಳೂರು ಕ್ರಾಂತಿಯಂತಹ ವಿಚಾರಗಳು ಇತಿಹಾಸದಲ್ಲಿ ಉಲ್ಲೇಖವಾಗಬೇಕಾದ ಅನಿವಾರ್ಯತೆಯಿದೆ.
ಆದರೆ, ಸಿಪಾಯಿ ದಂಗೆಗಿಂತಲೇ 20ವರ್ಷ ಮೊದಲು ಬ್ರಿಟಿಷ್ ದಾಸ್ಯದಿಂದ ಜನರನ್ನು ಮುಕ್ತರನ್ನಾಗಿಸಬೇಕು ಎಂದು ಕೆದಂಬಾಡಿ ರಾಮಯ್ಯ ಗೌಡ ಹಾಗೂ ಅವರ ತಂಡ ಮಾಡಿರುವ ಹೋರಾಟ ದೇಶದ ಇತಿಹಾಸದಲ್ಲಿ ದಾಖಲಾಗದಿರುವುದು ಬಹಳ ದುರದೃಷ್ಟಕರ ಎಂದು ಹೇಳಿದರು.
1837ರಲ್ಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭವಾಗಿತ್ತು ಆದರೆ ಇತಿಹಾಸದಲ್ಲಿ ದಾಖಲೆ ಇಲ್ಲ: ಸದಾನಂದ ಗೌಡ 1837ರ ಸ್ವಾತಂತ್ರ್ಯ ಹೋರಾಟ:ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು, 1857ರ ಸಿಪಾಯಿ ದಂಗೆಯ ಮೂಲಕ ಎಂಬುದು ದೇಶದ ಚರಿತ್ರೆಯಲ್ಲಿ ದಾಖಲಾಗಿದೆ. ಅದಕ್ಕಿಂತಲೂ 20 ವರ್ಷಗಳ ಮೊದಲೇ ನಡೆದಿರುವ ಮಂಗಳೂರಿನ ಕ್ರಾಂತಿ ಎಂಬ ವಿಚಾರವನ್ನು ಇಡೀ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದಾಖಲಿಸಬೇಕಾದ ತುರ್ತು ಅಗತ್ಯವಿದೆ. 1837ರಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಅನಾವರಣಕ್ಕೆ ಇಂದು ಗುದ್ದಲಿ ಪೂಜೆ ನಡೆದಿರುದು ನಿಜಕ್ಕೂ ಸಂತಸದ ವಿಚಾರ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು. ಇದನ್ನೂ ಓದಿ:ಸಿಗರೇಟ್ ಶೋಕಿಗಾಗಿ.. ಮಾಜಿ ಸಿಎಂ ಮನೆ ಸಮೀಪದಲ್ಲೇ ಕಳ್ಳರ ಕೈಚಳಕ