ಮಂಗಳೂರು:ಕೋವಿಡ್ನಿಂದ ಮೃತಪಟ್ಟ ಮುಸ್ಲಿಂ ಮಹಿಳೆಯರ ಮಯ್ಯತ್ ಸ್ನಾನ ನೆರವೇರಿಸಲು ನ್ಯಾಷನಲ್ ವುಮನ್ ಫ್ರಂಟ್ನ ಮುಸ್ಲಿಂ ಮಹಿಳೆಯರ ತಂಡವೊಂದು ಸಜ್ಜಾಗಿದೆ.
ಈ ತಂಡದಲ್ಲಿನ ಮಹಿಳೆಯರು ಪಿಪಿಇ ಕಿಟ್, ಮಾಸ್ಕ್, ಫೇಸ್ ಶೀಲ್ಡ್ ಕವರ್, ಗ್ಲೌಸ್ಗಳನ್ನು ಧರಿಸಿ ಮುಸ್ಲಿಂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುತ್ತಾರೆ.
ಈಗಾಗಲೇ ಈ ತಂಡ ಕೋವಿಡ್ನಿಂದ ಮೃತಪಟ್ಟ 7ಕ್ಕೂ ಅಧಿಕ ಮಹಿಳೆಯರ ಅಂತಿಮ ವಿಧಿ ನೆರವೇರಿಸಿ ಮೃತದೇಹಕ್ಕೆ ಫನ್ ಬಟ್ಟೆ ಧರಿಸಿ, ಅದನ್ನು ಪ್ಲಾಸ್ಟಿಕ್ನಿಂದ ಮುಚ್ಚಿ ಕುಟುಂಬಕ್ಕೆ ಹಸ್ತಾಂತರ ಮಾಡಿದೆ. ಒಂದು ವೇಳೆ ಮೃತರ ವಾರಸುದಾರರು ಇಲ್ಲದಿದ್ದಲ್ಲಿ ದಫನ ಕಾರ್ಯವನ್ನೂ ಕೂಡ ಇವರೇ ನೆರವೇರಿಸುತ್ತಾರೆ. ರಾಜ್ಯದಲ್ಲಿ ಈ ರೀತಿ 19 ತಂಡಗಳು ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ:ಇಂದು ಸಚಿವ ಸಂಪುಟ ಸಭೆ: ಲಾಕ್ಡೌನ್ ಗೊಂದಲಕ್ಕೆ ತೆರೆ, ಉಚಿತ ಲಸಿಕೆ ಬಗ್ಗೆ ನಿರ್ಧಾರ