ಕಲಬುರಗಿ: ಹಾಂಕಾಂಗ್ನಲ್ಲಿ ಆಯೋಜಿಸಿದ್ದ 'ಟ್ಯಾಲೆಂಟ್ ಇಂಟರ್ನ್ಯಾಷನಲ್ ಮಾಡೆಲ್-2019' ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ರಾಜ್ಯದ ಕಲಬುರಗಿಯ ಬಾಲಕಿ ಅನನ್ಯ ರೈ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ.
ಹಾಂಕಾಂಗ್ನಲ್ಲಿ ಚಿನ್ನ ಗೆದ್ದ ಕಲಬುರಗಿಯ ಬಾಲಕಿ! - Talent star international organisation
ಹಾಂಕಾಂಗ್ನಲ್ಲಿ ನಡೆದ 'ಟ್ಯಾಲೆಂಟ್ ಇಂಟರ್ನ್ಯಾಷನಲ್ ಮಾಡೆಲ್-2019' ಸ್ಪರ್ಧೆಯಲ್ಲಿ ರಾಜ್ಯದ ಕಲಬುರಗಿಯ ಬಾಲಕಿ ಅನನ್ಯ ರೈ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾಳೆ.
ಟ್ಯಾಲೆಂಟ್ ಸ್ಟಾರ್ ಇಂಟರ್ನ್ಯಾಷನಲ್ ಸಂಸ್ಥೆ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಜೆಸ್ಕಾಂ ಜೆಇ ರೂಪಾ ಚೌಹ್ಹಾಣ ಅವರ ಪುತ್ರಿ ಅನನ್ಯ ರೈ ಹೈದರಾಬಾದ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈ ಸ್ಪರ್ಧೆಗೂ ಮೊದಲು ನವದೆಹಲಿಯಲ್ಲಿ ನಡೆದಿದ್ದ ಟ್ಯಾಲೆಂಟ್ ಹಂಟ್ನಲ್ಲಿ ಅನನ್ಯ ರೈ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.
ಹಾಂಕಾಂಗ್ನಲ್ಲಿ ನಾಲ್ಕು ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ನಡೆಯಿತು. ನಾಲ್ಕು ಸುತ್ತಿನಲ್ಲೂ ತೀರ್ಪುಗಾರರ ಗಮನ ಸೆಳೆಯುವ ಮೂಲಕ ಅನನ್ಯ ಚಿನ್ನಕ್ಕೆ ಮುತ್ತಿಕ್ಕಿದ್ದಾಳೆ. ಭಾರತೀಯ ಸಂಪ್ರದಾಯಕ್ಕೆ ತಕ್ಕಂತೆ ಲಕ್ಷ್ಮಿ ವೇಷ ಧರಿಸಿ ಅನನ್ಯ ಗಮನ ಸೆಳೆದಿದ್ದಳು. ಈ ಬಾಲಕಿಯ ಸಾಧನೆಗೆ ಕಲಬುರಗಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.