ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ ಒಬ್ಬ ರಾಜಕೀಯ ದಲ್ಲಾಳಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ - Chalavadi Narayana Swamy slams against siddaramaiah

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಸಿದ್ದರಾಮಯ್ಯ ಒಬ್ಬ ಶನಿ, ಕಾಂಗ್ರೆಸ್ ಪಕ್ಷವನ್ನ ಮುಗಿಸುವವರೆಗೂ ಆತ ನಿದ್ರೆ ಮಾಡುವುದಿಲ್ಲ ಎಂದಿದ್ದಾರೆ. ನನ್ನ ಪ್ರಕಾರ ಸಿದ್ದರಾಮಯ್ಯ ಕೇವಲ ಶನಿ ಅಲ್ಲ, ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ

By

Published : Jun 13, 2022, 8:43 AM IST

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ರಾಜಕೀಯ ದಲ್ಲಾಳಿ ಎಂದು ಎಂಎಲ್​ಸಿ, ಬಿಜೆಪಿ ಎಸ್​ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಸಿದ್ದರಾಮಯ್ಯ ಒಬ್ಬ ಶನಿ, ಕಾಂಗ್ರೆಸ್ ಪಕ್ಷವನ್ನ ಮುಗಿಸುವವರೆಗೂ ಆತ ನಿದ್ರೆ ಮಾಡುವುದಿಲ್ಲ ಎಂದಿದ್ದಾರೆ.

ನನ್ನ ಪ್ರಕಾರ ಸಿದ್ದರಾಮಯ್ಯ ಕೇವಲ ಶನಿ ಅಲ್ಲ, ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು. ಸಿದ್ದರಾಮಯ್ಯ ಒಬ್ಬ ರಾಜಕೀಯ ದಲ್ಲಾಳಿ, ಹೊರಗಡೆ ಎಲ್ಲರಿಗೂ ದ್ವೇಷಿಸುವಂತೆ ವರ್ತಿಸುತ್ತಾರೆ. ಒಳಗೊಳಗೆ ಎಲ್ಲರ ಜೊತೆ ವ್ಯವಹಾರ ಮಾತಾಡ್ತಾರೆ. ಅವರಿಗೆ ಶಕುನಿ ಪಾತ್ರ ಮಾಡಿದ್ರೆ ಸೂಟ್ ಆಗುತ್ತೆ ಎಂದು ಕಿಡಿಕಾರಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ

ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಚುನಾವಣೆ ಅಧಿಕಾರಿಗಳಿಂದ ದಾಳಿ: ನಗದು ವಶ!

ABOUT THE AUTHOR

...view details