ಹುಬ್ಬಳ್ಳಿ: ಪತಿಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಣಕಲ್ನ ಸಾಯಿನಗರದಲ್ಲಿ ನಡೆದಿದೆ.
ಪತಿ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ.. - woman committed suicide
ಈ ದಂಪತಿ ಒಂದೂವರೆ ವರ್ಷದ ಹಿಂದೆಯೇ ಮದುವೆಯಾಗಿದ್ದರು. ಆದರೆ, ಪತಿ ಬೇರೆ ಮಹಿಳೆಯರೊಂದಿಗೆ ಫೋನ್‌ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದನಂತೆ. ಇದಲ್ಲದೆ ಪತ್ನಿಗೆ ನಿತ್ಯ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದನಂತೆ. ಇದರಿಂದ ಮನನೊಂದು ಮಹಿಳೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಸವಿತಾ ಮಹೇಶ ಪಾಟೀಲ್(28) ಆತ್ಮಹತ್ಯೆ ಮಾಡಿಕೊಂಡಿರುವವರು. ಮಹೇಶ ಪಾಟೀಲ್ ಎಂಬುವರನ್ನು ಒಂದೂವರೆ ವರ್ಷದ ಹಿಂದೆಯೇ ಮದುವೆಯಾಗಿದ್ದರು. ಆದರೆ, ಪತಿ ಮಹೇಶ್ ಪಾಟೀಲ್ ಬೇರೆ ಮಹಿಳೆಯರೊಂದಿಗೆ ಫೋನ್‌ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದನಂತೆ. ಇದಲ್ಲದೆ ಪತ್ನಿಗೆ ನಿತ್ಯ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದನಂತೆ. ಇದರಿಂದ ಮನನೊಂದು ಸವಿತಾ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಮಹಿಳೆಯ ಪೋಷಕರಾದ ಕ ಶಿವಬಾಯಿ ಬಸಲಿಂಗಪ್ಪ ಬೂದಿಹಾಳ ನೀಡಿರುವ ದೂರಿನ ಮೇರೆಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಮಹೇಶನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.