ಕರ್ನಾಟಕ

karnataka

ETV Bharat / city

ಪತಿಯನ್ನೇ ಹತ್ಯೆಗೈದ ಧಾರವಾಡ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ! - ಪತಿಯನ್ನೇ ಹತ್ಯೆಗೈದ ಧಾರವಾಡ ಮಹಿಳಾ ಮೋರ್ಚಾ ಅಧ್ಯಕ್ಷೆ

ಕುಡಿದು ಬಂದು ಜಗಳವಾಡುತ್ತಿದ್ದ ಪತಿಯನ್ನು ಪತ್ನಿಯೇ ಹತ್ಯೆಗೈದಿದ್ದಾಳೆ. ಆರೋಪಿತ ಪತ್ನಿ ಧಾರವಾಡ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಾರೆ..

Wife murders husband at Dharwad
ಶೋಭಾ ಹತ್ಯೆಗೈದ ಆರೋಪಿ

By

Published : Mar 12, 2022, 9:21 AM IST

ಧಾರವಾಡ :ಕುಡಿದು ಬಂದು ಜಗಳವಾಡುತ್ತಿದ್ದ ಪತಿಯನ್ನು ಪತ್ನಿ ಮಗಳೊಂದಿಗೆ ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ನಡೆದಿದೆ.

ಈರಣ್ಣ ಎಂಬುವರು ಕೊಲೆಯಾದ ಪತಿ. ಶೋಭಾ ಎಂಬಾಕೆ ಹತ್ಯೆಗೈದ ಆರೋಪಿ. ಇವರು ಧಾರವಾಡ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಶುಕ್ರವಾರ ಕುಡಿದು ಬಂದ ಈರಣ್ಣ ಪತ್ನಿ ಮತ್ತು ಮಗಳೊಂದಿಗೆ ಜಗಳಕ್ಕೆ ಮುಂದಾಗಿದ್ದರಂತೆ.

ಈ ವೇಳೆ ಶೋಭಾ ಮಗಳೊಂದಿಗೆ ಸೇರಿಕೊಂಡು ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣ ಅವರನ್ನು ಹುಬ್ಬಳ್ಳಿಯ ಕಿಮ್ಸ್​​​ನಲ್ಲಿ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ‌. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚೆಲುವೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಪತಿ ಬಂಧನ.. ಪ್ರೀತಿಗಾಗಿ ಹೆತ್ತವರನ್ನ ಬಿಟ್ಟ ಬಂದವಳಿಗೆ ಪ್ರಾಣ ತೆಗೆಯಲೆತ್ನಿಸಿದ ಕಿರಾತಕ..

ABOUT THE AUTHOR

...view details