ಕರ್ನಾಟಕ

karnataka

ETV Bharat / city

ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆಯಲಿ: ಹೊರಟ್ಟಿ ಆಗ್ರಹ

ಸುವರ್ಣಸೌಧ ಕಟ್ಟಿಸಿ ಹಾಗೆ ಬಿಡುವುದು ಒಳ್ಳೆಯದಲ್ಲ, ಬರುವ ಅಧಿವೇಶನ ಬೆಳಗಾವಿಯಲ್ಲೇ ನಡೆಯಬೇಕು ಎಂದು ಸಿಎಂಗೆ ಒತ್ತಾಯ ಮಾಡುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

By

Published : Mar 1, 2021, 4:48 PM IST

ಧಾರವಾಡ: ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧ ಕಟ್ಟಿಸಿ ಹಾಗೇ ಬಿಡುವುದು ಒಳ್ಳೆಯದಲ್ಲ, ಅಲ್ಲಿ ಅಧಿವೇಶನ ಮಾಡಬೇಕು. ಬರುವ ಅಧಿವೇಶನ ಬೆಳಗಾವಿಯಲ್ಲೇ ನಡೆಯಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ಈ‌ ಕುರಿತು ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಎಂಗೆ ಈ ಬಗ್ಗೆ ಹೇಳಿದ್ದೇನೆ. ಮತ್ತೊಮ್ಮೆ ಒತ್ತಾಯ ಮಾಡುವೆ.‌ ಬೆಳಗಾವಿಯಲ್ಲಿ ನಿಯಮಿತವಾಗಿ ಅಧಿವೇಶನ ನಡೆಯಬೇಕು, ಅದಕ್ಕಾಗಿ ಅಲ್ಲೇ ಶಾಸಕರ ಭವನವೂ ನಿರ್ಮಾಣ ಆಗಬೇಕು. ಶಾಸಕರ ಭವನ ಇದ್ದರೆ ಖರ್ಚು ಕಡಿಮೆ ಆಗುತ್ತದೆ. ಭವನ ಖಾಲಿ ಇದ್ದಾಗ ಏನು ಮಾಡಬೇಕು ಎನ್ನುವುದರ ವಿಚಾರವನ್ನೂ ಮಾಡಬಹುದು ಎಂದರು.

ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ಮಾಡಬೇಕು

ಕಲಾಪದಲ್ಲಿ ಮೊಬೈಲ್​​ ನಿಷೇಧ

ವಿಧಾನ ಪರಿಷತ್​ನಲ್ಲಿ ನಡೆಯುವ ಕಲಾಪಕ್ಕೆ ಮೊಬೈಲ್ ತರುವುದನ್ನು ನಿಷೇಧ ಮಾಡಲಾಗಿದೆ. ಬರುವ ಅಧಿವೇಶನದಿಂದಲೇ ಇದು ಕಾರ್ಯರೂಪಕ್ಕೆ ಬರುತ್ತದೆ. ವಿಧಾನ ಪರಿಷತ್​ ಕಲಾಪಗಳಿಗೆ ಬರುವ ಸದಸ್ಯರ ಮೊಬೈಲ್​ಗಳನ್ನು ಲಾಕರ್​ನಲ್ಲಿಟ್ಟು ಅವರಿಗೆ ಕೀ ಕೊಡಲಾಗುವುದು. ನಂತರ ಹೊರ ಹೋಗುವಾಗ ಅವರು ತಮ್ಮ ಮೊಬೈಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಭಾಪತಿ ಹುದ್ದೆ ಒಂದು ಸಾಂವಿಧಾನಿಕ ಹುದ್ದೆ. ಯಾವುದೇ ಮಂತ್ರಿ ಹಾಗೂ ಶಾಸಕರನ್ನು ಕರೆದು ವಿಚಾರ ಮಾಡುವ ಅಧಿಕಾರ ಇರುತ್ತದೆ. ಈ ಅಧಿಕಾರವನ್ನು ಸದುಪಯೋಗ ಮಾಡಿಕೊಂಡು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ABOUT THE AUTHOR

...view details