ಹುಬ್ಬಳ್ಳಿ:ಇಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಗರದ ಕ್ವಾಯಿನ್ ರಸ್ತೆಯಲ್ಲಿರುವ ತಮ್ಮ ಅಭಿಮಾನಿ ರಘು ಎಂಬುವವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಅಚ್ಚರಿಯುಂಟು ಮಾಡಿದರು.
ಅಭಿಮಾನಿ ಮನೆಗೆ ದಿಢೀರ್ ಎಂಟ್ರಿ ಕೊಟ್ಟ ಅಪ್ಪು... ಪುನೀತ್ ಕಂಡು ಪುಳಕಿತಗೊಂಡ ಕುಟುಂಬ - ಪುನೀತ್ ರಾಜ್ಕುಮಾರ್
ಅಭಿಮಾನಿಗಳು ಸ್ಟಾರ್ ನಟರ ಮನೆಗೆ ಭೇಟಿ ನೀಡುವುದು ಕಾಮನ್. ಆದ್ರೆ ಸ್ಟಾರ್ ನಟ ಅಭಿಮಾನಿಯ ಮನೆಗೆ ದಿಢೀರ್ ಎಂಟ್ರಿ ಕೊಟ್ರೆ ಹೇಗಿರತ್ತೆ. ರಾಜ್ಯ ವಾಣಿಜ್ಯ ನಗರಿ ಇಂದು ಇಂತಹ ಒಂದು ಸನ್ನವೇಶಕ್ಕೆ ಸಾಕ್ಷಿಯಾಯ್ತು. ಕನ್ನಡದ ರಾಜಕುಮಾರ ಪುನೀತ್ ರಾಜ್ಕುಮಾರ್ ತಮ್ಮ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಆತನಿಗೆ ಶಾಕ್ ನೀಡಿದ್ರು.
ಪುನೀತ್ ಅಭಿಮಾನಿಯಾದ ರಘು, ಪುನೀತ್ಗೆ ತಮ್ಮ ಮನೆಗೆ ಬರುವಂತೆ ಪದೇ ಪದೆ ಒತ್ತಾಯಿಸುತ್ತಿದ್ದರಂತೆ. ಅಂತೆಯೇ ಪುನೀತ್, ರಘು ಅವರ ಬಳಿ ನಿಮ್ಮ ಮನೆಗೆ ಬರುತ್ತೇನೆ ಎಂದು ಮಾತುಕೊಟ್ಟಿದ್ದರು. ಅದೇ ರೀತಿ ಇಂದು ಬೆಳಗ್ಗೆ ಏಕಾಏಕಿಯಾಗಿ ರಘು ಅವರ ಮನೆಗೆ ಭೇಟಿ ನೀಡಿರುವುದು, ರಘು ಅವರ ಕುಟುಂಬಕ್ಕೆ ಸಂತೋಷ ತಂದಿದೆ.
ತಮ್ಮ ಮನೆಗೆ ಆಗಮಿಸಿದ ಅಪರೂಪ ಅತಿಥಿ ಕಂಡು ಪುಳಕಿತಗೊಂಡ ಕುಟುಂಬದ ಸದಸ್ಯರ ಜೊತೆಗೆ ಪುನೀತ್ ಕಾಫಿ ಸವಿದು, ರಘು ಅವರ ಮಗನ ಜೊತೆ ಆಟವಾಡಿ ಅವರ ಮನೆಯ ಅಲ್ಬಂ ಫೋಟೋಗಳನ್ನು ವೀಕ್ಷಣೆ ಮಾಡಿದರು. ಮನೆಯವರ ಜೊತೆ ಕೆಲಹೊತ್ತು ಕಳೆದ ಪುನೀತ್ಗೆ, ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಈ ಮೂಲಕ ರಾಜಕುಮಾರ, ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದು, ರಘು ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.