ಕರ್ನಾಟಕ

karnataka

ETV Bharat / city

ಏಕ್ ಲವ್ ಯಾ ಸಿನಿಮಾ ಗೆದ್ದಿದೆ, ಎಲ್ಲರಿಗೂ ಧನ್ಯವಾದ: ಪ್ರೇಮ್, ರಕ್ಷಿತಾ - ಏಕ್ ಲವ್ ಯಾ ಕುರಿತು ರಾಣಾ​ ಮಾತನಾಡಿರುವುದು

ಏಕ್ ಲವ್ ಯಾ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಧಾರವಾಡದಲ್ಲಿ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ.

Ek Love Ya film
ಏಕ್ ಲವ್ ಯಾ ಸಿನಿಮಾ ಗೆಲುವು

By

Published : Mar 2, 2022, 8:38 AM IST

ಹುಬ್ಬಳ್ಳಿ(ಧಾರವಾಡ): ಏಕ್ ಲವ್ ಯಾ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೌಸ್ ಫುಲ್ ಬೋರ್ಡ್​​ ನೋಡಿ ಬಹಳ ಖುಷಿಯಾಗಿದೆ ಎಂದು ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಹರ್ಷ ವ್ಯಕ್ತಪಡಿಸಿದರು.

ಏಕ್ ಲವ್ ಯಾ ಸಿನಿಮಾ ಬಗ್ಗೆ ನಿರ್ದೇಶಕ, ನಿರ್ಮಾಪಕಿಯ ಮಾತು

ನಗರದಲ್ಲಿ ಮಂಗಳವಾರದಂದು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕಿ ರಕ್ಷಿತಾ ಪ್ರೇಮ್, ನಿರ್ಮಾಪಕಿಯಾಗಿ ನನಗೆ ತುಂಬಾ ಖುಷಿಯಾಗಿದೆ. ಮೊದಲು ಮೈಸೂರು, ಮಂಡ್ಯ, ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮೋಷನ್​ಗೆ ಬಂದಿದ್ದೇವೆ. ಇಲ್ಲೂ ಕೂಡಾ ಥಿಯೇಟರ್​ ಹೌಸ್ ಫುಲ್ ಆಗಿದೆ. ನನ್ನ ಸಹೋದರ (ನಾಯಕ ನಟ ರಾಣಾ)ನನ್ನು ಜನ ಒಪ್ಪುತ್ತಾರೋ, ಇಲ್ವೋ ಅಂತ ನನಗೆ ಭಯ ಇತ್ತು. ಕೊನೆಗೂ ಜನ ಒಪ್ಪಿಕೊಂಡಿದ್ದಾರೆ. ಹೀಗಾಗಿ ತುಂಬಾ ಖುಷಿಯಾಗಿದೆ. ಎಲ್ಲರೂ ದಯವಿಟ್ಟು ಥಿಯೇಟರ್​ಗಳಿಗೆ ಹೋಗಿ ಸಿನಿಮಾ ನೋಡಿ ಎಂದು ಮನವಿ ಮಾಡಿದರು.

ಪೈರಸಿ: ಪೈರಸಿ ಬಹಳ ಜೋರಾಗಿದೆ. ಪೈರಸಿ ಮಾಡಬಾರದು. ಟೆಲಿಗ್ರಾಂನಲ್ಲೂ ಕೂಡಾ ಲಿಂಕ್ ಲೀಕ್ ಆಗ್ತಿದೆ. ಯಾವುದೇ ಚಿತ್ರ ಇರಲಿ ಥಿಯೇಟರ್​ಗೆ ಹೋಗಿ ನೋಡಿ. ಈ ಪೈರಸಿಯಿಂದ ಬಹಳ ಬೇಸರವಾಗಿದೆ ಎಂದರು.

ಪೈರಸಿ ವಿರುದ್ಧ ಕ್ರಮ: ನಂತರ ನಿರ್ದೇಶಕ ಪ್ರೇಮ್​ ಮಾತನಾಡಿ, ನಮ್ಮ ಸಿನಿಮಾ ಗೆದ್ದಿದೆ. ಎಲ್ಲರಿಗೂ ಧನ್ಯವಾದಗಳು ಎಂದು ನಿರ್ದೇಶಕ ಪ್ರೇಮ್ ತಿಳಿಸಿದರು. ಏಕ್ ಲವ್ ಯಾ ಚಿತ್ರ ನೋಡಿ ಪತ್ನಿ ರಕ್ಷಿತಾ ಚೆನ್ನಾಗಿ ಮಾಡಿದಿಯಾ ಕಣಯ್ಯಾ ಅಂದ್ಲು. ನನಗೆ ಬಹಳ ಖುಷಿಯಾಗಿದೆ ಎಂದು ತಿಳಿಸಿದರು.

ಏಕ್ ಲವ್ ಯಾ ಸಿನಿಮಾ ಬಗ್ಗೆ ನಟ ನಟಿಯ ಮಾತು...

ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ಲವ್, ರೇಪ್ ಎಳೆಯನ್ನು ಇಟ್ಟುಕೊಂಡು ಈ ಮೊದಲು ಸಿನಿಮಾ ಮಾಡಿದ್ದೆ. ಜನ ನನ್ನ ಸಿನಿಮಾವನ್ನು ಸ್ವೀಕರಿಸಿದ್ದಾರೆ ಎಂದರು. ಇನ್ನೂ ಕನ್ನಡ ಸಿನಿಮಾಗಳನ್ನು ಬೆಳೆಸಬೇಕು. ಪೈರಸಿ ವಿರುದ್ಧ ಹೋದರೆ ನಮ್ಮ ನಮ್ಮಲ್ಲೇ ಜಗಳ ಹಚ್ತಾರೆ. ಹೀರೋಗಳ ಹೆಸರಿಗೆ ಟ್ಯಾಗ್ ಮಾಡಿ ಹೊರ ದೇಶಗಳಿಂ ಲಿಂಕ್ ಕಳಿಸುತ್ತಾರೆ. ಪೈರಸಿ ಮಾಡೋರನ್ನು ಹಿಡಿಯೋಕೆ ಆಗ್ತಿಲ್ಲ. ಮುಂದಿನ ವಾರ ಸಿಎಂ ಅವರನ್ನು ಭೇಟಿ‌ ಮಾಡಿ ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದರು.

ಸಿನಿಮಾ ಇಂಡಸ್ಟ್ರಿ ಬ್ಯುಸಿನೆಸ್ ಆಗಿದೆ: ಕನ್ನಡ ಸಿನಿಮಾ ರಂಗದಲ್ಲಿ ಒಗ್ಗಟ್ಟು ಪವೃತ್ತಿ ಬಂದಿಲ್ಲ. ಫಿಲ್ಮ್ ಛೇಂಬರ್​ಗೆ ಹೇಳಿದ್ರೆ ದೂರು ಕೊಡಿ ಅಂತಾರೆ. ಇಲ್ಲಿ ಯಾರಿಗ್ಯಾರು ಬರಲ್ಲ, ಅದು ತಪ್ಪೇನಲ್ಲ. ಅಪ್ಪಾಜಿ ಇದ್ದಾಗ ಈ ರೀತಿ ಇರಲಿಲ್ಲ. ಈಗ ಆ ರೀತಿ ಇಲ್ಲ, ನಾನು ಒಪನ್ ಆಗಿ ಹೇಳ್ತೇನಿ ಇಡೀ ಸಿನಿಮಾ ಇಂಡಸ್ಟ್ರಿ ಬ್ಯುಸಿನೆಸ್ ಆಗಿದೆ ಎಂದರು.

ಇದನ್ನೂ ಓದಿ:ಚಂದನವನಕ್ಕೆ ಎಂಟ್ರಿಕೊಟ್ಟ ಮತ್ತೊಬ್ಬ ರಾಜಕೀಯ ಮುಖಂಡನ ಪುತ್ರ; ಸಿಂಪಲ್ ಸುನಿ ಗರಡಿಯಲ್ಲಿ 'ಗತವೈಭವ'

ಮುಂದಿನ ತಿಂಗಳು ಸಿನಿಮಾವನ್ನು ತೆಲುಗುನಲ್ಲಿ ರಿಲೀಸ್​ ಮಾಡುತ್ತೇವೆ. ಪ್ರಸ್ತುತ ಎಲ್ಲ ಸಿನಿಮಾ ಓಡೋದು ಬರಿ ಎರಡು ವಾರ. 50 ದಿನ, 100 ದಿನ ಎನ್ನೋದು ಸುಳ್ಳು. ಯಾವ ಭಾಷೆ ಸಿನಿಮಾ ಆದ್ರೂ ಕೇವಲ ಎರಡು ವಾರ ಅಷ್ಟೇ. ಆ ಮೇಲೆ ಬರೀ ಥಿಯೇಟರ್ ಬಾಡಿಗೆ ಹೊಗುತ್ತಷ್ಟೇ. ಇನ್ಮೇಲೆ ವರ್ಷಕ್ಕೆರಡು ಸಿನಿಮಾ ಮಾಡುತ್ತೇನೆ ಎಂದರು.

ಇದೇ ವೇಳೆ ನಾಯಕ ರಾಣಾ ಹಾಗೂ ನಟಿ ಕೂಡ ಚಿತ್ರದ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಹೊಸಬರನ್ನು ಪ್ರೇಕ್ಷಕರು ಒಪ್ಪಿ ನಮಗೆ ಪ್ರೋತ್ಸಾಹಿಸಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.

ABOUT THE AUTHOR

...view details