ಹುಬ್ಬಳ್ಳಿ:ಕೊರೊನಾ ಸೋಂಕಿಗೆ ಅಧಿಕೃತ ಔಷಧಿಗಳನ್ನು ಕಂಡು ಹಿಡಿಯಲಾಗುತ್ತಿದ್ದು, ಈ ಮಧ್ಯೆ ಪ್ಲಾಸ್ಮಾ ದಾನ ಕೆಲವರ ಜೀವ ಉಳಿಸುವ ಕೆಲಸ ಮಾಡುತ್ತಿದೆ. ಕೆಎಸ್ಆರ್ಟಿಸಿ ಸಾರಿಗೆ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಕೆಎಸ್ಆರ್ಟಿಸಿ ಸಿಬ್ಬಂದಿ
ಬ್ಯಾಹಟ್ಟಿ ಗ್ರಾಮದ ಮಂಜಪ್ಪ ಹಂಗರಕಿ ಎಂಬುವರು, ಹುಬ್ಬಳ್ಳಿ ಲೈಫ್ ಲೈನ್ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ಸೋಂಕಿತ ರೋಗಿಗೆ ಎ ಪಾಸಿಟಿವ್ ಪ್ಲಾಸ್ಮಾ ದಾನ ಮಾಡಿದ್ದಾರೆ.
ಮಂಜಪ್ಪ ಹಂಗರಕಿ
ಬ್ಯಾಹಟ್ಟಿ ಗ್ರಾಮದ ಮಂಜಪ್ಪ ಹಂಗರಕಿ ಎಂಬುವರು ಪ್ಲಾಸ್ಮಾ ದಾನ ಮಾಡಿದ್ದು, ಇವರು ಕೆಎಸ್ಆರ್ಟಿಸಿಯ ಹುಬ್ಬಳ್ಳಿ ನಗರ ಸಾರಿಗೆ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಹುಬ್ಬಳ್ಳಿ ಲೈಫ್ ಲೈನ್ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ಸೋಂಕಿತ ರೋಗಿಗೆ ಎ ಪಾಸಿಟಿವ್ ಪ್ಲಾಸ್ಮಾ ಕೋರಿಕೆಗೆ ಸ್ಪಂದಿಸಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿ ಸಹಾಯ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.