ಧಾರವಾಡ:ತಾಲೂಕಿನ ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿ ನಡೆದ ವ್ಯಾಪಾರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಶ್ರೀರಾಮಸೇನಾ ಕಾರ್ಯಕರ್ತರಾದ ಮೈಲಾರಪ್ಪ ಗುಡ್ಡಪ್ಪನವರ, ಮಹಾನಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ವಶಕ್ಕೆ ಪಡೆದ ಆರೋಪಿಗಳಾಗಿದ್ದಾರೆ.
ನುಗ್ಗಿಕೇರಿಯಲ್ಲಿ ವ್ಯಾಪಾರಿ ತೆರವು, ಗಲಾಟೆ ಪ್ರಕರಣ: ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರು ಪೊಲೀಸ್ ವಶಕ್ಕೆ
ನುಗ್ಗಿಕೇರಿ ಗ್ರಾಮದ ದೇವಸ್ಥಾನ ಮುಸ್ಲಿಂ ವ್ಯಾಪಾರಿ ಅಂಗಡಿ ತೆರವಿಗೆ ಆಗ್ರಹ ಮತ್ತು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ಏಕಾಏಕಿ ದೇವಸ್ಥಾನದ ಆವರಣದಲ್ಲಿನ ಹಿಂದೂಯೇತರ ಅಂಗಡಿಗಳ ಮೇಲೆ ಶ್ರೀರಾಮಸೇನಾ ಕಾರ್ಯಕರ್ತರು ದಾಳಿ ಮಾಡಿ ಕಲ್ಲಂಗಡಿ ಹಾಗೂ ತೆಂಗಿನಕಾಯಿ ಹಾನಿಗೊಳಿಸಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ವ್ಯಾಪಾರಿ ನಬೀಸಾಬ್ ಅವರು ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ನಿನ್ನೆ (ಭಾನುವಾರ) ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ ಅಂಗಡಿ ತೆರವು