ಕರ್ನಾಟಕ

karnataka

ETV Bharat / city

ನಾನು ಕಾಂಗ್ರೆಸ್ ಸೇರುವ ಸುದ್ದಿ ಸುಳ್ಳು: ಶಾಸಕ ಅರವಿಂದ ಬೆಲ್ಲದ್​ ಸ್ಪಷ್ಟನೆ - ನಾನು ಕಾಂಗ್ರೆಸ್​ ಸೇರಲ್ಲ ಎಂದ ಶಾಸಕ ಅರವಿಂದ ಬೆಲ್ಲದ್​

ಬೇರೆಯವರೇ ನಮ್ಮ ಪಕ್ಷಕ್ಕೆ ಬರಲಿದ್ದಾರೆ.‌ ನಮ್ಮಲ್ಲಿ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ತಿಂಗಳ ಕೊನೆಯಲ್ಲಿ ಯಾರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಗೊತ್ತಾಗಲಿದೆ‌ ಎಂದು ಮಾರ್ಮಿಕವಾಗಿ ನುಡಿದರು..

mla-arvind-bellad
ಅರವಿಂದ ಬೆಲ್ಲದ್

By

Published : Jan 31, 2022, 3:59 PM IST

ಧಾರವಾಡ :ನಾನು ಕಾಂಗ್ರೆಸ್ ಸೇರುವೆನೆಂದು ವದಂತಿ ಹಬ್ಬಿಸುತ್ತಿದ್ದಾರೆ. ಇದು ಸುಳ್ಳು ಸುದ್ದಿ. ನಮಗೆ ಬೇಡವಾದವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್​ ಕಾಂಗ್ರೆಸ್ ಸೇರ್ಪಡೆ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದರು.

ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನನ್ನ ಗುರುತಿಸಿ ಟಿಕೆಟ್ ಕೊಟ್ಟು ಶಾಸಕನನ್ನಾಗಿ ಮಾಡಿದೆ. ಎರಡು ಸಲ ನಾನು ಶಾಸಕನಾದವನು. ನಮಗೆ ಬೇಡವಾದವರು ಬೇರೆ ಬೇರೆ ವಿಧಾನದ ಮೂಲಕ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಾನು ಕಾಂಗ್ರೆಸ್ ಸೇರುವ ಸುದ್ದಿ ಸುಳ್ಳು ಅಂತಾ ಶಾಸಕ ಅರವಿಂದ ಬೆಲ್ಲದ್​ ಸ್ಪಷ್ಟನೆ ನೀಡಿರುವುದು..

ಈ ಬಗ್ಗೆ ಪಕ್ಷದ ಹಿರಿಯರ ಜೊತೆಯೂ ಮಾತನಾಡಿದ್ದೇನೆ. ಇಂತಹ ವದಂತಿಗಳ ಬಗ್ಗೆ ಕಿವಿಗೊಡದಂತೆ ತಿಳಿಸಿದ್ದೇನೆ. ನಾನು ಎರಡನೇ ಸಲ ಶಾಸಕನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸಹಜವಾಗಿ ಇದು ಕೆಲವರ ಕಣ್ಣು ಕುಕ್ಕುತ್ತಿದೆ. ನಮ್ಮ ಅಭಿವೃದ್ಧಿ ಸಹಿಸಲಾಗದವರು ಹೀಗೆಲ್ಲ ಮಾಡುತ್ತಿದ್ದಾರೆ ಎಂದರು.

ಬೇರೆಯವರೇ ನಮ್ಮ ಪಕ್ಷಕ್ಕೆ ಬರಲಿದ್ದಾರೆ.‌ ನಮ್ಮಲ್ಲಿ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ತಿಂಗಳ ಕೊನೆಯಲ್ಲಿ ಯಾರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಗೊತ್ತಾಗಲಿದೆ‌ ಎಂದು ಮಾರ್ಮಿಕವಾಗಿ ನುಡಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details