ಹುಬ್ಬಳ್ಳಿ: ಫೇಸ್‌ಬುಕ್ ಮೂಲಕ ನಗರದ ಯುವಕನೊಬ್ಬನನ್ನು ಪರಿಚಯಿಸಿಕೊಂಡ ಯುವತಿಯೊಬ್ಬಳು ಹೂಡಿಕೆ ಮಾಡಲೆಂದು ಅಮೆರಿಕದಿಂದ ಬರುತ್ತಿದ್ದೇನೆಂದು ನಂಬಿಸಿ 59,200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಶಾಂತಿ ನಗರದ ನಿಖಿಲ್ ಶಾಹ ಅವರಿಗೆ ಅಶರ್ ಡಾಮಿನ್ ಎಂಬ ಯುವತಿ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದರು. ರಿಕ್ವೆಸ್ಟ್‌ಗೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು. ಬಳಿಕ ನಿಖಿಲ್ ಸ್ನೇಹ ಸಂಪಾದಿಸಿದ ಯುವತಿ ವಾಟ್ಸ್ಆ್ಯಪ್ ನಂಬರ್ ಪಡೆದಿದ್ದಳು. ತಮ್ಮ ಬಳಿ ಇರುವ ಯುಎಸ್ ಡಾಲರ್ ಅನ್ನು ಹುಬ್ಬಳ್ಳಿಯಲ್ಲಿ ಹೂಡಿಕೆ ಮಾಡಲು ಬರುತ್ತಿದ್ದೇನೆ ಎಂದು ನಂಬಿಸಿದ್ದಳು.