ಕರ್ನಾಟಕ

karnataka

ETV Bharat / city

ಧಾರವಾಡದಲ್ಲಿ ಮನೆಗೆ ಬೆಂಕಿ... ಒಬ್ಬ ಸಜೀವ ದಹನ - ಧಾರವಾಡದಲ್ಲಿ ಅಗ್ನಿ ಅವಘಡ

ಮನೆಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನವಾಗಿದ್ದಾರೆ.

ಧಾರವಾಡದಲ್ಲಿ ಮನೆಗೆ ಬೆಂಕಿ,Man Died in house fire in Dhawara
ಧಾರವಾಡದಲ್ಲಿ ಮನೆಗೆ ಬೆಂಕಿ

By

Published : Dec 25, 2021, 3:22 PM IST

ಧಾರವಾಡ: ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನಗೊಂಡ ಘಟನೆ ನಗರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ವಿನಾಯಕ ಚಿನಿವಾಲರ (36) ಎಂಬಾತ ಸಜೀವ ದಹನವಾದವರು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ವಿನಾಯಕ ದೀಪ ಹಚ್ಚಲು ಹೋಗಿ ಎಡವಟ್ಟು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ವಿನಾಯಕ ವಿಪರೀತ ಮದ್ಯವ್ಯಸನಿಯಾಗಿದ್ದು, ಕುಡಿದು ಮನೆಯಲ್ಲಿ ನಿದ್ರೆಗೆ ಜಾರಿದಾಗ ಮನೆಯಲ್ಲಿನ ಬೆಂಕಿ ತಗುಲಿರಬಹುದು ಎಂದು ಸಹ ಹೇಳಲಾಗುತ್ತಿದೆ.

ಮನೆಯಲ್ಲಿ ಕರೆಂಟ್ ಇಲ್ಲದ್ದರಿಂದ ವಿನಾಯಕನ ತಾಯಿ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

(ಇದನ್ನೂ ಓದಿ: ಕಾಂಗ್ರೆಸ್​​ ಸೇರಿ ವಿವಿಧ ಪಕ್ಷಗಳಿಂದ ಆಫರ್​ ಬಂದಿವೆ.. ಈವರೆಗೂ ಫೈನಲ್​ ನಿರ್ಧಾರ ಆಗಿಲ್ಲ ಎಂದ ಭಜ್ಜಿ.. )

(ಇದನ್ನೂ ಓದಿ: ಮಾಲೇಗಾಂವ್​ನಲ್ಲಿ 30 ಖಡ್ಗಗಳು ಪತ್ತೆ, ಇಬ್ಬರ ಬಂಧನ : ಸಂಚು ತಪ್ಪಿಸಿದ್ರಾ ಪೊಲೀಸರು?)

ABOUT THE AUTHOR

...view details