ಕರ್ನಾಟಕ

karnataka

ETV Bharat / city

ಪ್ರಧಾನಿ ನರೇಂದ್ರ ಮೋದಿ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ: ಖರ್ಗೆ - hubli today news

ದಿನದಿಂದ ದಿನಕ್ಕೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ‌ಯಾಗುತ್ತಿದೆ. ನಮ್ಮ ಸರ್ಕಾರದ ವೇಳೆ ಒಂದು ರೂಪಾಯಿ ಬೆಲೆ ಏರಿಕೆಯಾಗಿದ್ದಕ್ಕೆ ಪ್ರತಿಭಟನೆ ಮಾಡಿದ ಬಿಜೆಪಿಯವರು ಈಗ ಎಲ್ಲಿ ಹೋದ್ರು. ಮೋದಿ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

Mallikarjun Kharge
Mallikarjun Kharge

By

Published : Oct 27, 2021, 12:52 PM IST

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ. ಮೋದಿಯವರು ಕಪ್ಪು ಹಣ ತರುತ್ತೇವೆ ಅಂದ್ರು, ಆದರೆ ಇದುವರೆಗೂ ಹಣ ಬರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಹಾನಗಲ್​ಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ‌ಯಾಗುತ್ತಿದೆ. ನಮ್ಮ ಸರ್ಕಾರದ ವೇಳೆ ಒಂದು ರೂಪಾಯಿ ಬೆಲೆ ಏರಿಕೆಯಾಗಿದ್ದಕ್ಕೆ ಪ್ರತಿಭಟನೆ ಮಾಡಿದ ಬಿಜೆಪಿಯವರು ಎಲ್ಲಿ ಹೋದ್ರು?. ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಿ ನಡೆಸುತ್ತಿದ್ದು, ಅದಕ್ಕೆ ಜನರು ಪ್ರತಿ ಉತ್ತರ ನೀಡುತ್ತಾರೆ. ಇದೇ ರೀತಿ ಹಿಂದೆ ಹಿಟ್ಲರ್ ಆಡಳಿತ ಮಾಡಿದ್ರು. ಸೋನಿಯಾ ಗಾಂಧಿ ನಮ್ಮ ನಾಯಕಿ, ಈಗ ಅವರೇ ನಮ್ಮ ಅಧ್ಯಕ್ಷೆ. ರಾಹುಲ್ ಗಾಂಧಿ ಕೂಡ ನಮ್ಮ ನಾಯಕರು ಎಂದರು.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ರಾಹುಲ್ ಗಾಂಧಿ ಸರ್ಮರ್ಥರಾಗಿದ್ದಕ್ಕೆ ಅವರ ವಿರುದ್ಧ ಮೋದಿ, ಶಾ ಕಣ್ಣಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರು, ಆದರೆ ಸಬ್ ಕಾ ಸಾಥ್ ಅಲ್ಲ, ಸಬ್ ಕಾ ವಿಕಾಸ ಅಲ್ಲ, ಸಬ್ ಕಾ ಸರ್ವನಾಶ ಆಗ್ತಾ ಇದೆ ಎಂದರು.

ಗೆಲ್ಲುವ ವಿಶ್ವಾಸ:

ನಮಗೆ ಸಿಕ್ಕಿರುವ ವರದಿ ಪ್ರಕಾರ, ಎರಡೂ ಮತಕ್ಷೇತ್ರಗಳಲ್ಲಿ ಬಹುಮತ ಸಿಗುವ ವಿಶ್ವಾಸವಿದೆ. ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details