ಕರ್ನಾಟಕ

karnataka

ETV Bharat / city

ಏಕಾಏಕಿ ಹೊತ್ತಿ ಉರಿದ ಲಾರಿ: ಸಾಮಗ್ರಿಗಳು ಸುಟ್ಟು ಭಸ್ಮ - ಹುಬ್ಬಳ್ಳಿ ಧಾರವಾಡ ಸುದ್ದಿ

ಬೆಳಗಾವಿಯಿಂದ ಹುಬ್ಬಳ್ಳಿಯ ಕಡೆ ಪ್ರೆಷರ್ ಕುಕ್ಕರ್​ನ ಬಿಡಿಭಾಗಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧಲ್ಲಿಯೇ ಹೊತ್ತಿ ಉರಿದಿದೆ. ಲಾರಿಯಲ್ಲಿದ್ದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.

lorry burnt in fire incident at dharwad highway
ಆಕಸ್ಮಿಕ‌ ಬೆಂಕಿಯಿಂದ ಹೊತ್ತಿ ಉರಿದ ಲಾರಿ

By

Published : Apr 2, 2021, 9:34 PM IST

ಧಾರವಾಡ: ಪ್ರೆಷರ್ ಕುಕ್ಕರ್‌ನ ಬಿಡಿಭಾಗಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ಹೊತ್ತಿ‌ ಉರಿದ ಘಟನೆ ನಗರದ ಹೆದ್ದಾರಿಯಲ್ಲಿ ನಡೆದಿದೆ.

ಬೆಳಗಾವಿಯಿಂದ ಹುಬ್ಬಳ್ಳಿಯ ಕಡೆ ಪ್ರೆಷರ್ ಕುಕ್ಕರ್​ನ ಬಿಡಿಭಾಗಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧಲ್ಲಿಯೇ ಹೊತ್ತಿ ಉರಿದಿದೆ. ಮಧ್ಯಾಹ್ನ ಬಿಸಿಲು ಹೆಚ್ಚಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ‌ ಪಟ್ಟರು.

ಲಾರಿಯಲ್ಲಿದ್ದ ಸಾಮಗ್ರಿಗಳೆಲ್ಲಾ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ರಸ್ತೆಯಲ್ಲಿ ಹೋಗ್ತಿದ್ದ ಪುಟ್ಟ ಬಾಲಕಿ ಮೇಲೆರಗಿದ ಬೀದಿ ನಾಯಿ!

ABOUT THE AUTHOR

...view details