ಹುಬ್ಬಳ್ಳಿ:ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 2,800 ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.
ಇನ್ಫೋಸಿಸ್ ವತಿನಿಂದ ಹುಬ್ಬಳ್ಳಿಯಲ್ಲಿ 2,800 ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ - ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ
ಇನ್ಫೋಸಿಸ್ ಫೌಂಡೇಶನ್ನ ಅಮೋಲ್ ಕುಲಕರ್ಣಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 2,800 ಜನರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನ ಹಸ್ತಾಂತರಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಛತಾ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ ಪಾಲಿಕೆಯ ಪೌರಕಾರ್ಮಿಕರು, ಆಟೋ-ಟಿಪ್ಪರ್ ಚಾಲಕರು, ಟ್ರ್ಯಾಕ್ಟರ್ ಡ್ರೈವರ್ಗಳು, ಲೋಡರ್ಸ್, ಜೆಟ್ಟಿಂಗ್ ಯಂತ್ರದ ಸಿಬ್ಬಂದಿಗೆ ಆಹಾರ ಸಾಮಗ್ರಿಗಳನ್ನ ವಲಯವಾರು ವಿತರಿಸಲಾಯಿತು. 2800 ಆಹಾರ ಪದಾರ್ಥಗಳ ಕಿಟ್ಗಳನ್ನ ಪಾಲಿಕೆಯ ಆಯುಕ್ತ ಡಾ. ಸುರೇಶ್ ಬಿ. ಇಟ್ನಾಳ ಅವರಿಗೆ ಇನ್ಫೋಸಿಸ್ ಫೌಂಡೇಶನ್ನ ಅಮೋಲ್ ಕುಲಕರ್ಣಿ ಹಸ್ತಾಂತರಿಸಿದರು. ಇನ್ಫೋಸಿಸ್ ಫೌಂಡೇಶನ್ ಸಮಾಜಮುಖಿ ಕಾರ್ಯಗಳನ್ನ ಪಾಲಿಕೆಯ ಆಯುಕ್ತರು ಶ್ಲಾಘಿಸಿದರು.
ಈ ಕಿಟ್ 5 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಲೀಟರ್ ಎಣ್ಣೆ, ಮಸಾಲೆ ಪದಾರ್ಥಗಳು, ಅರ್ಧ ಕೆಜಿ ಕಡಲೆ ಬೇಳೆ ಸೇರಿದಂತೆ ಹತ್ತು ಪದಾರ್ಥಗಳನ್ನ ಒಳಗೊಂಡಿದೆ.