ಧಾರವಾಡ:ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯ ಪ್ರದೇಶಕ್ಕೆ ಜಿಲ್ಲೆಯ ಯಾವುದೇ ವ್ಯಕ್ತಿ ಅಥವಾ ಕುಟುಂಬ ಪ್ರವಾಸ ಕೈಗೊಂಡಿದ್ದರೆ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರು ಕೂಡಲೇ ಜಿಲ್ಲಾಡಳಿತದ ಉಚಿತ ಸಹಾಯವಾಣಿ ಸಂಖ್ಯೆ 1077 ಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಯಾತ್ರಿಕರ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಧಾರವಾಡ: ಅಮರನಾಥ ಯಾತ್ರಿಕರ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ - Amarnath Cave Temple in South Kashmir
ಜಿಲ್ಲೆಯ ಯಾರಾದರೂ ಅಮರನಾಥ ಯಾತ್ರೆ ಕೈಗೊಂಡಿದ್ದರೆ ಅಂತಹವರ ಮಾಹಿತಿ ನೀಡಿ ಸುರಕ್ಷಿತ ವಾಪಸಾತಿಗೆ ಸಹಕರಿಸುವಂತೆ ಧಾರವಾಡ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಅಮರನಾಥ ಗುಹಾ ದೇವಾಲಯ
ಅಮರನಾಥ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಯಾತ್ರಿಕರ ಸುರಕ್ಷತಾ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯ ಯಾರಾದರೂ ಯಾತ್ರೆ ಕೈಗೊಂಡಿದ್ದರೆ ಆ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಯಾತ್ರಾರ್ಥಿಗಳ ಸಂರಕ್ಷಣೆ ಮತ್ತು ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮೇಘಸ್ಫೋಟ: ಅಮರನಾಥನ ದರ್ಶನವಿಲ್ಲದೇ ಶಿವಮೊಗ್ಗ ಪಾಲಿಕೆ ಸದಸ್ಯೆ ತಂಡ ವಾಪಸ್, ಚಿಕ್ಕಮಗಳೂರು ಯಾತ್ರಾರ್ಥಿಗಳೂ ಸೇಫ್