ಧಾರವಾಡ : ಹೆತ್ತ ತಾಯಿಯನ್ನೇ ಅಪ್ತಾಪ್ತೆ ಹಾಗೂ ಆಕೆಯ ಪ್ರೇಮಿ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ರಾತ್ರಿ ಪ್ರೇಮಿ ಜೊತೆ ಸೇರಿ ತಾಯಿಗೆ ಇರಿದು ಪರಾರಿಯಾಗಿದ್ದಾಳೆ.
ಮಗಳು ಹಾಗೂ ಆಕೆಯ ಪ್ರೇಮಿಯಿಂದ ಇರಿತಕ್ಕೆ ಒಳಗಾದ ತಾಯಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಳೆದ ವರ್ಷ ಇದೇ ಬಾಲಕಿ ವಿಚಾರವಾಗಿ ಪ್ರೇಮಿ ಜೈಲು ಸೇರಿದ್ದನು ಎನ್ನಲಾಗಿದೆ. ಪೋಕ್ಸೊ ಕಾಯ್ದೆ ಅಡಿ ಪರಶುರಾಮ್ ಲಮಾಣಿ ಜೈಲು ಸೇರಿದ್ದರು. ಏಪ್ರಿಲ್ನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದನು.