ಕರ್ನಾಟಕ

karnataka

ಕುತೂಹಲ ಕೆರಳಿಸಿದ 'ಚಿಟಗುಪ್ಪಿ ಬ್ರಿಟಿಷರ ಲಾಕರ್'.. ಗೋಡೆಯಲ್ಲಿರುವ ಲಾಕರ್​ನಲ್ಲಿ ಏನಿದೆ!?

By

Published : Nov 12, 2021, 6:24 PM IST

ನಂತರ 1936ರಲ್ಲಿ ಇದು ಆಸ್ಪತ್ರೆಯಾಗಿ ಬದಲಾಗಿತ್ತು. ಪುರಾತನ ಕಟ್ಟಡದಲ್ಲಿ ಅಂದಿನಿಂದ ಇಂದಿನವರೆಗೆ ಲಕ್ಷಾಂತರ ರೋಗಿಗಳಿಗೆ ಆರೈಕೆ ಮಾಡಲಾಗಿದೆ.ಸದ್ಯ ಶಿಥಿಲಾವಸ್ಥೆ ತಲುಪಿರುವ ಕಟ್ಟಡದ ತೆರುವ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಕಟ್ಟಡ ಗೋಡೆಯೊಂದರಲ್ಲಿ (Chitaguppi Hospital locker) ಲಾಕರ್​ ಪತ್ತೆಯಾಗಿದೆ..

british-locker-found-in-hubli-chitaguppi-hospital
ಚಿಟಗುಪ್ಪಿ ಬ್ರಿಟಿಷರ ಲಾಕರ್

ಹುಬ್ಬಳ್ಳಿ: ಐತಿಹಾಸಿಕ ಚಿಟಗುಪ್ಪಿ ಆಸ್ಪತ್ರೆಯು (Chitaguppi Hospital) ಶಿಥಿಲಾವಸ್ಥೆ ತಲುಪಿದ ಹಿನ್ನೆಲೆ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯ ಗೋಡೆಗಳಲ್ಲಿ ಲಾಕರ್ ಒಂದು ಪತ್ತೆಯಾಗಿದೆ. ಇದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

127 ವರ್ಷ ಇತಿಹಾಸವಿರುವ ನಗರದ ಚಿಟಗುಪ್ಪಿ ಆಸ್ಪತ್ರೆ ಕಟ್ಟಡ ಬ್ರಿಟಿಷರ ಕಾಲದ್ದಾಗಿದೆ. ರಾವ್ ಬಹದ್ದೂರ್ ಶ್ರೀನಿವಾಸ ಬಾಲಾಜಿ ಚಿಟಗುಪ್ಪಿ ಅವರು ಜನರಿಗೆ ಅನುಕೂಲವಾಗಲೆಂದು ಔಷಧಾಲಯ ಪ್ರಾರಂಭಿಸಿದ್ದರು.

ನಂತರ 1936ರಲ್ಲಿ ಇದು ಆಸ್ಪತ್ರೆಯಾಗಿ ಬದಲಾಗಿತ್ತು. ಪುರಾತನ ಕಟ್ಟಡದಲ್ಲಿ ಅಂದಿನಿಂದ ಇಂದಿನವರೆಗೆ ಲಕ್ಷಾಂತರ ರೋಗಿಗಳಿಗೆ ಆರೈಕೆ ಮಾಡಲಾಗಿದೆ.

ಸದ್ಯ ಶಿಥಿಲಾವಸ್ಥೆ ತಲುಪಿರುವ ಕಟ್ಟಡದ ತೆರುವ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಕಟ್ಟಡ ಗೋಡೆಯೊಂದರಲ್ಲಿ (Chitaguppi Hospital locker) ಲಾಕರ್​ ಪತ್ತೆಯಾಗಿದೆ. ಅದರಲ್ಲಿ ಪ್ರಾಚೀನ ಔಷಧಿಗಳಿಗೆ ಸಂಬಂಧಿಸಿದ ವಸ್ತುಗಳು, ಇಲ್ಲವೇ ನಗ-ನಾಣ್ಯಗಳಿರಬಹುದೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯನ್ನ ಕೇಳಿದ್ರೆ, ಲಾಕರ್ ತುಂಬಾ ಹಳೆಯದ್ದು, ಅದರ ಕೀಲಿಯೂ ಇಲ್ಲ. ನಾವು ಅದನ್ನು ತೆಗೆದು ಇಲ್ಲ ಎಂದು ಹೇಳುತ್ತಿದ್ದಾರೆ.

ಆದ್ರೆ, ಲಾಕರ್‌ ಅನ್ನು ಜಿಲ್ಲಾಧಿಕಾರಿಗಳು, ಪುರಾತತ್ವ ಇಲಾಖೆಯ ಅಧಿಕಾರಿ ಸೇರಿದಂತೆ ಮೇಲಾಧಿಕಾರಿಗಳ ಸಮ್ಮುಖದಲ್ಲಿ ತೆರೆದು ಅದರಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕೆಂಬುದು ಜನರ ಆಶಯವಾಗಿದೆ.

ABOUT THE AUTHOR

...view details