ಹುಬ್ಬಳ್ಳಿ :ಬಸವರಾಜ್ ಹೊರಟ್ಟಿಯವರು ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡಿರೋದು ಸ್ವಾಗತಾರ್ಹಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಬಸವರಾಜ್ ಹೊರಟ್ಟಿ ಆರ್‌ಎಸ್‌ಎಸ್ 'ಕೇಶವ ಕುಂಜ' ಭೇಟಿ ಸ್ವಾಗತಾರ್ಹ : ಸಚಿವ ಜಗದೀಶ್ ಶೆಟ್ಟರ್ - Basavaraja horatti RSS
ಅದೊಂದು ದೇಶಪ್ರೇಮದ ಸಂಕೇತ. ಹೀಗಾಗಿ, ಅವರು ಹೋಗಿರೋದು ವಿಶೇಷ ಏನೂ ಏನಿಲ್ಲ. ಅವರು ಕಚೇರಿಗೆ ಹೋಗಿದ್ದು, ಸಂತೋಷ ತಂದಿದೆ..
ಬಸವರಾಜ್ ಹೊರಟ್ಟಿ ಆರ್‌ಎಸ್‌ಎಸ್
ನಗರದಲ್ಲಿ ಇಂದು ಮಾತನಾಡಿದ ಸಚಿವರು, ಬಸವರಾಜ್ ಹೊರಟ್ಟಿಯವರು ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡಿರೋದು ಸ್ವಾಗತಾರ್ಹ. ರಾಷ್ಟ್ರೀಯ ಸ್ವಯಂಸೇವಕ ಸಂಘ ಎಲ್ಲರಿಗೂ ಸಂಬಂಧಪಟ್ಟಿದ್ದಾಗಿದೆ. ಕೇವಲ ಬಿಜೆಪಿಗೆ ಮಾತ್ರ ಸಂಬಂಧಿಸಿದ್ದಲ್ಲ.
ಅದೊಂದು ದೇಶಪ್ರೇಮದ ಸಂಕೇತ. ಹೀಗಾಗಿ, ಅವರು ಹೋಗಿರೋದು ವಿಶೇಷ ಏನೂ ಏನಿಲ್ಲ. ಅವರು ಕಚೇರಿಗೆ ಹೋಗಿದ್ದು, ಸಂತೋಷ ತಂದಿದೆ ಎಂದರು. ಮುಂದಿನ ದಿನಗಳಲ್ಲಿ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕೆ ಬರುವ ವಿಚಾರವಾಗಿ ಹೊರಟ್ಟಿಯವರನ್ನೇ ಪ್ರಶ್ನಿಸುವಂತೆ ಹೇಳಿದರು.