ಕರ್ನಾಟಕ

karnataka

ETV Bharat / city

ಹೆಣ್ಮಕ್ಕಳು ಹುಟ್ಟಿದ್ದಕ್ಕೆ ಇಷ್ಟು ಸಿಟ್ಟಾ... ಅವಳಿ ಮಕ್ಕಳು ಹೆತ್ತ ತಾಯನ್ನು ಸುಟ್ಟು ಕೊಲ್ಲಲು ಯತ್ನಿಸಿದ ಪತಿರಾಯ - ಹಿಗ್ಗಾ-ಮುಗ್ಗಾ ಥಳಿತ

ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ಹಿಗ್ಗಾ-ಮುಗ್ಗಾ ಹೊಡೆದು ಪೆಟ್ರೋಲ್​ ಸುರಿದು ಕೊಲ್ಲಲು ಯತ್ನಿಸಿದ್ದಾನೆ. ಅದೃಷ್ಟಾವಶಾತ್​ ಮಹಿಳೆ ಮನೆಯಿಂದ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

A husband who tried to kill his wife

By

Published : Aug 27, 2019, 6:08 PM IST

ಹುಬ್ಬಳ್ಳಿ:ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ಹಿಗ್ಗಾ-ಮುಗ್ಗಾ ಹೊಡೆದು ಪೆಟ್ರೋಲ್​ ಸುರಿದು ಕೊಲ್ಲಲು ಯತ್ನಿಸಿದ್ದಾನೆ.

ಈ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ. ಸಲ್ಮಾನ್ ಅಹ್ಮದ್ ಎಂಬಾತ ಪತ್ನಿಯ ಹತ್ಯೆಗೆ ಯತ್ನಿಸಿದವನು. ಬೇಬಿ ಆಯಿಶಾ ದೌರ್ಜನ್ಯಕ್ಕೆ ಒಳಗಾದವರು.

ಏಳು ವರ್ಷಗಳ ಹಿಂದೆ ಈ ದಂಪತಿಗೆ ವಿವಾಹವಾಗಿದೆ. ಈಗಾಗಲೇ ಅವರಿಗೆ ಒಂದು ಹೆಣ್ಣು, ಒಂದು ಗಂಡು ಮಗು ಇದೆ. ಮತ್ತೊಂದು ಹೆರಿಗೆಯಲ್ಲಿ ಬೇಬಿ ಆಯಿಶಾ ಅವಳಿ-ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಮಹಿಳೆ

ಇದರಿಂದ ನಿತ್ಯ ಕುಡಿದು ಬಂದು ಬಾಯಿಗೆ ಬಂದಂತೆ ಬೈದು ಜಗಳ ಕಾಯುತ್ತಿದ್ದ. ಜಗಳ ಮೀತಿ ಮೀರಿದಾಗ ಸಮುದಾಯದ ಹಿರಿಯರು ಸಂಧಾನ ಮಾಡುತ್ತಿದ್ದರು. ಆದ್ದರಿಂದ ಪತ್ನಿ ಮೇಲೆ ಏಕಾಏಕಿ ಹಲ್ಲೆ ಮಾಡಿದಲ್ಲದೆ ಪೆಟ್ರೊಲ‌್ ಸುರಿದು ಬೆಂಕಿ ಹಚ್ವಲು ಯತ್ನಿಸಿದ್ದ. ಆಗ, ಆಯಿಶಾ ಹೊರಗಡೆ ಓಡಿ ಬಂದು ಜೀವ ಉಳಸಿಕೊಂಡರು.

ಬೇಬಿ ಆಯಿಶಾರನ್ನು ಸ್ಥಳೀಯರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details