ಕರ್ನಾಟಕ

karnataka

ರಾಮ, ಸೀತೆಯ ದಾಹ ನೀಗಿಸಿದ್ದು ಇದೇ ತೀರ್ಥರಾಮೇಶ್ವರ ಪುಣ್ಯಕ್ಷೇತ್ರವಂತೆ!

By

Published : Mar 11, 2021, 7:03 AM IST

ಕೊಡದಿಂದ ಎಷ್ಟು ತೀರ್ಥ ತೆಗೆದರೂ ಕೊಳ ಮತ್ತೆ ತುಂಬಿಕೊಳ್ಳುತ್ತೆ. ಇದೇ ನೀರಿನಲ್ಲಿ ಸ್ನಾನ ಮಾಡಿದ್ರೆ ಕಾಶಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿದಂತೆ ಎಂಬ ನಂಬಿಕೆ ಇದೆ. ತೀರ್ಥರಾಮೇಶ್ವರನ ಪಕ್ಕದಲ್ಲೇ ಬ್ರಹ್ಮನ ದೇವಾಲಯವಿದ್ದು ಭೂಮಿ ಮೇಲೆಲ್ಲೂ ಪೂಜೆ ನಡೆಯದ ಬ್ರಹ್ಮನಿಗೆ ಇಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತದೆ.

ತೀರ್ಥರಾಮೇಶ್ವರ
ತೀರ್ಥರಾಮೇಶ್ವರ

ದಾವಣಗೆರೆ:ಜಿಲ್ಲೆಯ ನ್ಯಾಮತಿ ತಾಲೂಕು ಬೆಳಗುತ್ತಿ ಗ್ರಾಮದಲ್ಲಿನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ತೀರ್ಥರಾಮೇಶ್ವರನು ತನ್ನ ಆಲಯದ ಕೊಳದಲ್ಲಿ ನೀರನ್ನು ಎಂದೂ ಬತ್ತಿ ಹೋಗಲು ಬಿಟ್ಟಿಲ್ಲ. ಇದನ್ನು ತೀರ್ಥವೆಂದು ಭಾವಿಸುವ ಸಾವಿರಾರು ಭಕ್ತರು ಕಾಶಿಯ ಗಂಗಾ ನದಿಯಂತೆ ನೀರನ್ನು ಪೂಜಿಸುವುದು ಇಲ್ಲಿನ ವೈಶಿಷ್ಟ್ಯ.

ಹೌದು. ತೀರ್ಥರಾಮೇಶ್ವರ ದೇವಾಲಯದಲ್ಲಿನ ಸಣ್ಣ ಕೊಳದಲ್ಲಿ ವರ್ಷದ 360 ದಿನಗಳೂ‌ ಪುಣ್ಯ ತೀರ್ಥ ತುಂಬಿರುತ್ತದೆ. ಕೊಡದಿಂದ ಎಷ್ಟು ತೀರ್ಥ ತೆಗೆದ್ರೂ ಕೊಳ ಮತ್ತೆ ತುಂಬಿಕೊಳ್ಳುತ್ತೆ. ಇದೇ ನೀರಿನಲ್ಲಿ ಸ್ನಾನ ಮಾಡಿದ್ರೆ ಕಾಶಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿದಂತೆ ಎಂಬ ನಂಬಿಕೆ ಇದೆ. ತೀರ್ಥರಾಮೇಶ್ವರನ ಪಕ್ಕದಲ್ಲೇ ಬ್ರಹ್ಮನ ದೇವಾಲಯವಿದ್ದು ಭೂಮಿ ಮೇಲೆ ಎಲ್ಲೂ ಪೂಜೆ ನಡೆಯದ ಬ್ರಹ್ಮನಿಗೆ ಇಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತದೆ.

ತೀರ್ಥರಾಮೇಶ್ವರ ಪುಣ್ಯಕ್ಷೇತ್ರ

ತೀರ್ಥರಾಮೇಶ್ವರ ಸ್ಥಳದ ಇತಿಹಾಸ
ರಾಮ, ಲಕ್ಷ್ಮಣ, ಸೀತೆ ವನವಾಸದಲ್ಲಿದ್ದಾಗ ಇದೇ ಮಾರ್ಗವಾಗಿ ಬಂದಿದ್ದರಂತೆ. ದಾಹ ನೀಗಿಸಲು ನೀರಿಲ್ಲದ ವೇಳೆ ರಾಮ ತನ್ನ ಬಾಣದಿಂದ ಭೂಮಿಗೆ ಹೊಡೆದ ಬೆನ್ನಲ್ಲೇ ನೀರು ಚಿಮ್ಮಿ ಬಂತಂತೆ. ಶ್ರೀರಾಮ ಬಿಟ್ಟ ಬಾಣದಿಂದ ಬಂದ ನೀರು ಕಾಶಿಯಿಂದ ಬಂದದ್ದು ಎನ್ನಲಾಗಿದ್ದು, ಮುಂದೆ ಅದು ಕಾಶಿತೀರ್ಥ ಎಂದಾಯಿತು. ತೀರ್ಥ ಉದ್ಭವವಾದ ಸ್ಥಳದ ಕೂಗಳತೆ ದೂರದಲ್ಲಿ ಲಿಂಗ ಉದ್ಭವಾಗಿದ್ದರಿಂದ ಈ ಧಾರ್ಮಿಕ ಕ್ಷೇತ್ರಕ್ಕೆ ತೀರ್ಥರಾಮೇಶ್ವರನ ಹೆಸರು ಬಂದಿದೆ ಎಂಬುದು ಸ್ಥಳೀಯರ ನಂಬಿಕೆ.

ಈ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚಲುವರಂಗಪ್ಪರಾಯ ಎಂಬ ರಾಜ ವಿಜಯನಗರ, ಆನೆಗೊಂದಿ ಅರಸರ ಸವಿನೆನಪಿಗಾಗಿ ಊರಿನವರ ಸಹಕಾರದೊಂದಿಗೆ ತೀರ್ಥರಾಮೇಶ್ವರನ ದೇಗುಲ ನಿರ್ಮಿಸಿದ್ದ ಅನ್ನೋದನ್ನು ಚರಿತ್ರೆ ಹೇಳುತ್ತದೆ.

ತೀರ್ಥರಾಮೇಶ್ವರನ ನೀರಿನಲ್ಲಿದೆ ರೋಗನಿರೋಧಕ‌ ಶಕ್ತಿ...
ದೇಗುಲಕ್ಕೆ ತೆರಳುವ ಎಡಭಾಗದ ಹಾದಿಯಲ್ಲಿ ಕಿರುಬೆರಳಿನಷ್ಟು ಗಾತ್ರದ ಜಲಧಾರೆ ಸದಾಕಾಲ ಹರಿಯುತ್ತಿರುತ್ತದೆ. ಈ ನೀರು ಉತ್ತರಪ್ರದೇಶದ ಕಾಶಿಯಿಂದ ಹರಿದುಬರುತ್ತಿದೆ ಎಂಬ ನಂಬಿಕೆ‌ ಇದೆ. ಬೆಟ್ಟದೊಳಗಿನಿಂದ ಗುಪ್ತ ಗಾಮಿನಿಯಂತೆ ಬಸವಣ್ಣನ ಬಾಯಿಯಿಂದ ಬೀಳುವ ನೀರು ಕೊಳಕ್ಕೆ ಬೀಳುತ್ತದೆ. ಕೊಳಕ್ಕೆ ಬೀಳುವ ನೀರನ್ನು ಜನರು ಬಳಕೆ ಮಾಡುವುದರಿಂದ ರೋಗರುಜಿನಗಳು ವಾಸಿಯಾಗುತ್ತವೆ ಎಂದು ಹೇಳಲಾಗ್ತಿದೆ.

ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ತೀರ್ಥರಾಮೇಶ್ವರ..
ಮಳೆ ಬಾರದೆ ಬರಗಾಲ ಆವರಿಸಿದಾಗ ತೀರ್ಥರಾಮೇಶ್ವರನಿಗೆ ಕ್ಷೀರಾಭಿಷೇಕ ಮಾಡಿದ ಕೆಲವೇ ಗಂಟೆಗಳಲ್ಲಿ ಮಳೆ ಧರೆಗಿಳಿದಿರುವುದು, ಮಕ್ಕಳಾಗದೆ ಇರುವ ಸ್ತ್ರೀಯರಿಗೆ ಸಂತಾನ ಭಾಗ್ಯ ಕರುಣಿಸುವುದು, ಜಾನುವಾರುಗಳಿಗೆ ಆರೋಗ್ಯ ಸರಿ ಇಲ್ಲದ ವೇಳೆ ಇಲ್ಲಿ ಹೋಳಿಗೆ ಮಾಡಿಕೊಡುವ ಹರಕೆ ಕಟ್ಟಿಕೊಂಡರೆ ಜಾನುವಾರುಗಳ ಆರೋಗ್ಯ ಸರಿಹೋಗುತ್ತಂತೆ. ಹಾಗಾಗಿ ರಾಜ್ಯಾದ್ಯಂತ ಹಲವು ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ABOUT THE AUTHOR

...view details