ದಾವಣಗೆರೆ: ನಗರದ ಜನರು ಆಟೋ ಬಸ್ ಹಿಡಿಯದೇ ಸುಲಭವಾಗಿ ಸಂಚರಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಬೈಸಿಕಲ್ ಯೋಜನೆ ಜಾರಿಗೆ ತಂದು ವರ್ಷಗಳೇ ಉರುಳಿವೆ. ನಗರದ 18 ಕಡೆ ಕೂ ಬೈಸಿಕಲ್ ಪಾಯಿಂಟ್ ನಿರ್ಮಿಸಿ 100 ಸಾಮಾನ್ಯ ಬೈಸಿಕಲ್ ಹಾಗೂ 100 ಎಲೆಕ್ಟ್ರಿಕಲ್ ಬೈಸಿಕಲ್‌ಗಳನ್ನು ಜಾರಿಗೆ ತರಲಾಗಿತ್ತು. ಪರಿಸರ ಸ್ನೇಹಿಯ ಈ ಯೋಜನೆ ಜಾರಿಗೆ ತಂದು ಸಾಕಷ್ಟು ದಿನಗಳ ಉರುಳಿರುವ ಬೆನ್ನಲ್ಲೇ ಬೈಸಿಕಲ್‌ಗಳ ಸೇವೆ ಯಾರಿಗೂ ಬೇಡ ಎನಿಸಿದೆ.
ಈ ಬೈಸಿಕಲ್‌ಗಳನ್ನು ವಿದ್ಯಾರ್ಥಿಗಳು, ಜನಸಾಮಾನ್ಯರು ಉಪಯೋಗಿಸುತ್ತಿದ್ದರು. ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್ ಹೊಡೆತಕ್ಕೆ ಬೈಸಿಕಲ್‌ಗಳು ಇದೀಗ ನಿಂತ ಜಾಗದಲ್ಲೇ ನಿಂತಿವೆ. ಶಾಲಾ ಕಾಲೇಜುಗಳು ಬಂದ್ ಆಗಿರುವುದ್ದರಿಂದ ಈ ಬೈಸಿಕಲ್‌ಗಳನ್ನು ಉಪಯೋಗಿಸುವರಿಲ್ಲದೇ ಹಾಗೇ ನಿಂತಿವೆ. ಈ ಬೈಸಿಕಲ್ ಉಪಯೋಗದಿಂದ ಇಂಧನ ಉಳಿತಾಯ ಮಾಡಬಹುದಾಗಿದ್ದು, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಪ್ಪಿಸಬಹುದಾದ ದೃಷ್ಟಿಯಿಂದ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಇದರ ಪೋಷಣೆ ಮಾಡುವ ಜವಾಬ್ದಾರಿ ಮಾತ್ರ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜವಾಬ್ದಾರಿಯಾಗಿದೆಯಂತೆ