ದಾವಣಗೆರೆ: ನಗರಾಭಿವೃದ್ಧಿ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್ ಪಿತೃ ವಿಯೋಗ ದುಃಖದ ನಡುವೆಯೂ ದಾವಣಗೆರೆಗೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.
ಕಳೆದ ದಿನ ತಂದೆಯನ್ನು ಕಳೆದುಕೊಂಡಿದ್ದ ಸಚಿವರು, ಸಕಲ ಕಾರ್ಯಗಳನ್ನು ನೆರವೇರಿಸಿ ಅ ದುಃಖವನ್ನು ಮರೆತು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು. ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿಯವರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದ ಬೈರತಿ ಬಸವರಾಜ್, ಬಳಿಕ ತೆರೆದ ವಾಹನದಲ್ಲಿ ಕವಾಯತು ತಂಡಗಳನ್ನು ವೀಕ್ಷಣೆ ಮಾಡಿದರು. ನಂತರ ಪೊಲೀಸ್ , ಅಗ್ನಿಶಾಮಕ, ಗೃಹ ರಕ್ಷಕ ದಳದಿಂದ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.