ದಾವಣಗೆರೆ: ನಗರದ ರೈಲ್ವೆ ಪೊಲೀಸರು ಚಿನ್ನಾಭರಣ ಇದ್ದ ಬ್ಯಾಗ್ ಅವನ್ನು ಮಾಲೀಕರಿಗೆ ಸೇರಿಸಿದ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ರುಖಾಯ್ಯಾ ಬಾನು ಮುಲ್ಲಾ ಹಾಗೂ ಮಹಮ್ಮದ್ ಯಾಸೀನ್ ಮುಲ್ಲಾ ದಂಪತಿ ರೈಲಿನಿಂದ ಇಳಿಯುವಾಗ 60 ಗ್ರಾಂ ಚಿನ್ನಾಭರಣಗಳ ಬ್ಯಾಗ್ ಬಿಟ್ಟು ಹೋಗಿದ್ದರು.
ರೈಲಿನಲ್ಲಿ ಸಿಕ್ಕ ಬ್ಯಾಗ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಒಡವೆ; ಮಾಲೀಕರಿಗೆ ನೀಡಿ ಪೊಲೀಸರ ಮಾನವೀಯತೆ - ದಾವಣಗೆರೆ ರೈಲ್ವೆ ಪೊಲೀಸರು
ರೈಲಿನಲ್ಲಿ ಬಿಟ್ಟುಹೋದ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದಾವಣಗೆರೆ ರೈಲ್ವೆ ಪೊಲೀಸರು ಮಾಲೀಕರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ರೈಲಿನಲ್ಲಿ ಸಿಕ್ಕ ಬ್ಯಾಗ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಒಡವೆ; ವಾರಸುದಾರರಿಗೆ ನೀಡಿ ಪೋಲಿಸರ ಮಾನವೀಯತೆ
ರಾಣೆಬೆನ್ನೂರು ರೈಲ್ವೆ ನಿಲ್ದಾಣದಲ್ಲಿ ಇಳಿದ ಬಳಿಕ ಬ್ಯಾಗ್ ಇಲ್ಲದ್ದನ್ನು ನೋಡಿಕೊಂಡ ದಂಪತಿ, ಕೂಡಲೇ ಮುಂದಿನ ನಿಲ್ಧಾಣವಾದ ದಾವಣಗೆರೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ದಾವಣಗೆರೆ ರೈಲ್ವೆ ಪೊಲೀಸರು ಬೋಗಿಯಲ್ಲಿದ್ದ ಬ್ಯಾಗ್ ತೆಗೆದುಕೊಂಡು ಠಾಣೆಯಲ್ಲಿಟ್ಟುಕೊಂಡು ವಾರಸುದಾರರಿಗೆ ಒಪ್ಪಿಸಿದ್ದಾರೆ. ದಾವಣಗೆರೆ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.