ದಾವಣಗೆರೆ:ಕೋವಿಡ್ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯೋರ್ವ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಲು ಹಿಡಿದು ಕಣ್ಣೀರು ಹಾಕಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ನಡೆದ ಕೊರೊನಾದಿಂದ ಚೇತರಿಸಿಕೊಂಡ 47 ಮಂದಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಘಟನೆ ನಡೆಯಿತು.
ಕೋವಿಡ್ ಕೇರ್ ಸೆಂಟರ್ನಲ್ಲಿಯೇ ವಾಸ್ತವ್ಯ ಹೂಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿರುವ ರೇಣುಕಾಚಾರ್ಯ ಅವರ ಕಾರ್ಯವೈಖರಿ ಹಾಗೂ ನೀಡುತ್ತಿದ್ದ ಸೌಲಭ್ಯಗಳನ್ನು ನೆನೆದು ವ್ಯಕ್ತಿಯೋರ್ವ ಕಾಲು ಹಿಡಿದರು. ಬಳಿಕ ಕಣ್ಣೀರು ಹಾಕಿ ಶಾಸಕರ ಕಾರ್ಯವನ್ನು ಕೊಂಡಾಡಿದರು.