ಕರ್ನಾಟಕ

karnataka

ನಡು ರಸ್ತೆಯಲ್ಲೇ ವೃದ್ಧೆ ಬಿಟ್ಟುಹೋದ ಆರೋಗ್ಯ ಇಲಾಖೆ: ಕುಟುಂಬದವರ ಆಕ್ರೋಶ

By

Published : Jul 30, 2020, 1:40 PM IST

ಕೋವಿಡ್ ನಿಂದ ಗುಣಮುಖರಾದ ವೃದ್ಧೆಯನ್ನು ಆ್ಯಂಬುಲೆನ್ಸ್​​ ಚಾಲಕ ಮನೆವರೆಗೂ ಕರೆದುಕೊಂಡು ಹೋಗದೇ ನಡು ರಸ್ತೆಯಲ್ಲೆ ಬಿಟ್ಟು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮನೆ ಸುತ್ತ ಹಾಕಿದ್ದ ಬ್ಯಾರಿಕೇಡ್ ಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಹರ
ಹರಿಹರ

ಹರಿಹರ( ದಾವಣಗೆರೆ) :ಕೋವಿಡ್ ನಿಂದ ಗುಣಮುಖರಾದ ವೃದ್ಧೆಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿರುವುದಕ್ಕೆ ಆಕ್ರೋಶಗೊಂಡ ಸಂಬಂಧಿಕರು, ಮನೆಯ ಸುತ್ತಲು ಹಾಕಿದ್ದ ಕಂಟೇನ್ ಮೆಂಟ್ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಬಾಂಗ್ಲಾ ಬಡಾವಣೆಯ ನಿವಾಸಿ 70 ವರ್ಷದ ವೃದ್ಧೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜು.24 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಗುಣಮುಖರಾಗಿದ್ದಾರೆ ಎಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಆ್ಯಂಬುಲೆನ್ಸ್‌ನಲ್ಲಿ ಹರಿಹರಕ್ಕೆ ಕಳುಹಿಸಿದ್ದರು.

ಆದರೆ, ಆ್ಯಂಬುಲೆನ್ಸ್‌ ಚಾಲಕ ವೃದ್ಧೆಯನ್ನು ಮನೆಯ ಹತ್ತಿರ ಇಳಿಸದೇ ನಗರದ ಹರಪನಹಳ್ಳಿ ರಸ್ತೆ, ಎಂಕೆಇಟಿ ಶಾಲೆಯ ಹತ್ತಿರ ಲಗೇಜ್ ಸಮೇತ ಇಳಿಸಿ ಹೋಗಿದ್ದಾನೆ ಎನ್ನಲಾಗಿದೆ.

ವೃದ್ಧೆಗೆ ನಡೆಯಲು ಆಗದ ಕಾರಣ ಅಲ್ಲಿಯೇ ಕುಳಿತು ಕೊಂಡಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ವೃದ್ಧೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಅಕ್ಕ ಪಕ್ಕದ ನಿವಾಸಿಗಳು ಸೋಂಕಿತರ ಮನೆಯ ಸುತ್ತಲು ನಿರ್ಮಿಸಿದ್ದ ಬ್ಯಾರಿಕೇಡ್ ಕಿತ್ತುಹಾಕಿ ಆ್ಯಂಬುಲೆನ್ಸ್‌ ಚಾಲಕ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟಿಸಿದರು.

ಜಿಲ್ಲಾಸ್ಪತ್ರೆಯಿಂದ ಕೆರೆ ಮಾಡಿ ಇಂದು ಡಿಸ್ಚಾರ್ಜ್ ಮಾಡುತ್ತೇವೆ ಎಂದು ತಿಳಿಸಿದ್ದರು. ಅದಕ್ಕೆ ನಾವು ಬಾಡಿಗೆ ವಾಹನ ಮಾಡಿಕೊಂಡು ದಾವಣಗೆರೆಗೆ ಜಿಲ್ಲಾಸ್ಪತ್ರೆಗೆ ತೆರಳಿದ್ದೆವು. ಅಷ್ಟರಲ್ಲೇ ಆಸ್ಪತ್ರೆಯವರು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಬಂದು ನಡು ರಸ್ತೆಯಲ್ಲಿ ಬಿಟ್ಟು ಹೊಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಪಿಎಸ್‌ಐ ಶೈಲಶ್ರೀ ಭೇಟಿ ನೀಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು.

ABOUT THE AUTHOR

...view details