ಕರ್ನಾಟಕ

karnataka

ETV Bharat / city

ರಾಣೆಬೆನ್ನೂರು: ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಭೂಪ! - crime latest news

38 ವರ್ಷದ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.

Rannebennuru crime news

By

Published : Oct 1, 2019, 4:45 PM IST

ರಾಣೆಬೆನ್ನೂರ:ಕುಡಿದ ಅಮಲಿನಲ್ಲಿ ತೇಲುವವರು ಇತರರ ಮೇಲೆ ಸುಖಾಸುಮ್ಮನೆ ಜಗಳ ಕಾಯುತ್ತಾರೆ. ಇಲ್ಲವೇ ತನಗನಿಸಿದ್ದನ್ನು ವದರುತ್ತಾ ಇರುತ್ತಾರೆ. ಇನ್ನೂ ಕೆಲವರಿಗೆ ಏನು ಮಾಡುತ್ತಿದ್ದೇನೆ ಎಂಬ ಅರಿವೇ ಇರುವುದಿಲ್ಲ. ಹಾಗೇ ಇಲ್ಲೊಬ್ಬ ಭೂಪ ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಹೌದು, 38 ವರ್ಷದ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಹರಿತವಾದ ಆಯುಧದಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ. ಮರ್ಮಾಂಗ ಕೊಯ್ದುಕೊಂಡು ಗಂಭೀರ ಗಾಯಗೊಂಡಿದ್ದಾನೆ. ಬಳಿಕ ಅಮಲು ಇಳಿದಿದ್ದು, ಜೋರಾಗಿ ಕೂಗಾಡಿದ್ದಾನೆ. ಈ ಆಘಾತಕಾರಿ ಘಟನೆ ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಈತ ನಿತ್ಯ ಕುಡಿಯುತ್ತಿದ್ದ. ಎಂದಿನಂತೆ ಕುಡಿದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿಕೊಂಡಿದ್ದಾನೆ. ಮರ್ಮಾಂಗ ಕತ್ತರಿಸಿಕೊಂಡ ನಂತರ ಜೋರಾಗಿ ಚೀರಾಡಿದ್ದಾನೆ. ಚೀರಾಟ ಕೇಳಿಸಿಕೊಂಡ ಸ್ಥಳೀಯರು, ಏನೋ ಅನಾಹುತ ಆಯಿತೆಂದು ಅಲ್ಲಿಗೆ ಹೋಗಿದ್ದಾರೆ. ಬಳಿಕ ವಿಷಯ ತಿಳಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾವಣಗೆರೆ ಎಸ್.ಎಸ್. ಆಸ್ಪತ್ರೆಯಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ.

ABOUT THE AUTHOR

...view details