ಕರ್ನಾಟಕ

karnataka

ETV Bharat / city

ಸಿ.ಪಿ.ಯೋಗೇಶ್ವರ್​​ 'ಆಪರೇಷನ್​ ಕಮಲ' ಮಾಡಲು ಶ್ರಮ ವಹಿಸಿದ್ದಾರೆ: ಎಂಟಿಬಿ ನಾಗರಾಜ್ - ಸಿಪಿ ಯೋಗೇಶ್ವರ್​ಗೆ ಸಚಿವ ಸ್ಥಾನ

ಆಪರೇಷನ್ ಕಮಲದಲ್ಲಿ ಕೆಲಸ ಮಾಡಿದ್ದ ಯೋಗೇಶ್ವರ್​ಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟಿರುವುದು ಹೈಕಮಾಂಡ್‌ ಮತ್ತು ಸಿಎಂ ತೀರ್ಮಾನ. ಅದಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ. ಆದ್ರೆ ನಾನು ಒಂದು ರೂಪಾಯಿಯನ್ನು ಸಹ ಯೋಗೇಶ್ವರ್​ ಅವರಿಗೆ ಕೊಟ್ಟಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.

yogishwar-worked-hard-to-make-operation-lotus
ಎಂಟಿಬಿ ನಾಗರಾಜ್

By

Published : Jan 15, 2021, 8:16 PM IST

Updated : Jan 15, 2021, 8:50 PM IST

ಹೊಸಕೋಟೆ:ಸಿ. ಪಿ. ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿದ್ದನ್ನು ಸಮರ್ಥಿಸಿಕೊಂಡಿರುವ ಸಚಿವ ಎಂಟಿಬಿ ನಾಗರಾಜ್, ಯೋಗೇಶ್ವರ್​ಗೆ ಸಾಲ ನೀಡಿರುವುದನ್ನು ನಿರಾಕರಿಸಿದ್ದಾರೆ.

ಎಂಟಿಬಿ ನಾಗರಾಜ್‌ ಹೇಳಿಕೆ

ಹೊಸಕೋಟೆ ಪಟ್ಟಣದ ಕ್ರೀಡಾಂಗಣದಲ್ಲಿ ಬಿಜೆಪಿ ಟೌನ್ ಅಧ್ಯಕ್ಷ ಜಯರಾಜ್ ಹಮ್ಮಿಕೊಂಡಿದ್ದ ಗೋ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರ ಪ್ರಶ್ನೆಗೆ ಎಂಟಿಬಿ ಉತ್ತರಿಸಿದರು. ಈ ವೇಳೆ ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿರುವುದನ್ನು ಅವರು​ ಸಮರ್ಥಿಸಿಕೊಂಡರು.

ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು, ಕೆಲವು ಶಾಸಕರನ್ನು ಆಪರೇಷನ್ ಕಮಲ‌ ಮಾಡಲು ಯೋಗೇಶ್ವರ್​ ಸಾಕಷ್ಟು ಶ್ರಮವಹಿಸಿದ್ದಾರೆ. ಅದರಂತೆ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗುವುದಕ್ಕೆ ನಾವು ಹದಿನಾರು ಜನ ರಾಜೀನಾಮೆ ಕೊಟ್ಟು ಬಂದ್ವಿ, ನಮ್ಮೆಲ್ಲರ ಪಾತ್ರವೂ ಇಲ್ಲಿ ಮುಖ್ಯ ಎಂದರು.

ಇದನ್ನೂ ಓದಿ: ಬೈಕ್‌ ಸವಾರಿ ವೇಳೆ ಅಡ್ಡಬಂದ ಒಂಟೆ; ಬೆಂಗಳೂರಿನ ಬೈಕ್‌ ಕಿಂಗ್‌ ರಿಚರ್ಡ್‌ ಶ್ರೀನಿವಾಸ್ ದುರ್ಮರಣ

'ಸಚಿವ ಸ್ಥಾನ ಹೈಕಮಾಂಡ್​ ತೀರ್ಮಾನ'

ಆಪರೇಷನ್ ಕಮಲದಲ್ಲಿ ಕೆಲಸ ಮಾಡಿದ್ದ ಯೋಗೇಶ್ವರ್​ಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟಿರುವುದು ಹೈಕಮಾಂಡ್‌ ಮತ್ತು ಸಿಎಂ ಅವರ ತೀರ್ಮಾನ. ಅದಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ ಎಂದು ತಿಳಿಸಿದರು.

'ಯೋಗೇಶ್ವರ್​​​ಗೆ ಒಂದು ರೂಪಾಯಿ ಕೊಟ್ಟಿಲ್ಲ'

ಒಂಬತ್ತು ಕೋಟಿ ರೂ.ಗಳ ಸಾಲದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, ನಾನು ಒಂದು ರೂಪಾಯಿ ಹಣವನ್ನೂ ಕೊಟ್ಟಿಲ್ಲ ಎಂದರು.

Last Updated : Jan 15, 2021, 8:50 PM IST

ABOUT THE AUTHOR

...view details