ಕರ್ನಾಟಕ

karnataka

ETV Bharat / city

ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಪತಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ - crime latest news

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ.

woman-corpse-in-decay

By

Published : Sep 29, 2019, 11:04 PM IST

ಬೆಂಗಳೂರು: ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಪತಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಂದಿನಿ ಮೃತರು. ಮನೆಯಿಂದ ದುರ್ವಾಸನೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಹಾಸನದ ಬೇಲೂರು ತಾಲೂಕಿನ ಮಧು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ನಂದಿನಿಯನ್ನು ವಿವಾಹವಾಗಿದ್ದ. ದಂಪತಿಗೆ ಏಳು ವರ್ಷದ ಹೆಣ್ಣು ಮಗಳು ಹಾಗೂ ನಾಲ್ಕು ವರ್ಷ ಪುತ್ರ ಇದ್ದಾನೆ. ಪತಿ ಮಧು ಆಟೋ ಚಾಲಕನಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ.

ಸೆ. 22ರಂದು ಮನೆಗೆ ಬೀಗ ಹಾಕಿಕೊಂಡು ತನ್ನಿಬ್ಬರು ಮಕ್ಕಳೊಂದಿಗೆ ಹಾಸನದಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದ. ಮಕ್ಕಳೊಂದಿಗೆ ಬಂದಿದ್ದ ಮಧುನನ್ನು ಚಿಕ್ಕಮ್ಮ ಪ್ರಶ್ನಿಸಿದ್ದರೂ ಆತ ಪ್ರತಿಕ್ರಿಯೆ ನೀಡಿರಲಿಲ್ಲ. ಸಂಜೆ ತನಕ ಉಪಚರಿಸಿದ್ದ ಚಿಕ್ಕಮ್ಮ ತನ್ನ ಊರಿಗೆ ಹೋಗುವಂತೆ ಮಧುಗೆ ಹೇಳಿ ಕಳುಹಿಸಿದ್ದರಂತೆ.

ಮಧು ವರ್ತನೆಯಿಂದ ಅನುಮಾನಗೊಂಡು ಮಕ್ಕಳ ಜತೆ ಮನೆಗೆ ಬಂದಿದ್ದ ವಿಚಾರವನ್ನು ಆತನ ಸಹೋದರ ಸತೀಶ್‌ಗೆ ಹೇಳಿದ್ದರು. ಸತೀಶ್, ಮಧು ಮೊಬೈಲ್‌ಗೆ ಕರೆ ಮಾಡಿದ್ದಾಗ ಸ್ವಿಚ್ ಆಫ್ ಆಗಿತ್ತು. ನಾಲ್ಕೈದು ದಿನ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್​ ಆಫ್​ನಲ್ಲೇ ಇತ್ತು. ಹೀಗಾಗಿ ಬೆಂಗಳೂರಿನ ಸಂಬಂಧಿಕರೊಬ್ಬರಿಗೆ ತಿಳಿಸಿ ಮಧು ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದರು. ಸಂಬಂಧಿಯೊಬ್ಬರು ಮನೆ ಬಳಿ ಬಂದಾಗದುರ್ವಾಸನೆ ಬರುತ್ತಿತ್ತು.

ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ನಮಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details