ಕರ್ನಾಟಕ

karnataka

ETV Bharat / city

ತುರ್ತು ಸೇವಾ ನೆಪದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ - ರಾಜ್ಯ ಸರ್ಕಾರ ಲಾಕ್​ಡೌನ್

ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ರಸ್ತೆಯಲ್ಲಿ ಭೌತಿಕವಾಗಿ ತಡೆದು ದಂಡ ವಿಧಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ಲಾಕ್​​ಡೌನ್ ಅವಧಿಯಲ್ಲಿಯೂ ಅಗತ್ಯ ಸೇವೆ ಖರೀದಿ ಸೋಗಿನಲ್ಲಿ ವಾಹನ ಸವಾರರು ಟ್ರಾಫಿಕ್ ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನೆಲೆ, ದಂಡ ವಿಧಿಸಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ.

violation-of-traffic-rules-in-emergency-service-is-a-fine
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ

By

Published : May 20, 2021, 8:19 PM IST

ಬೆಂಗಳೂರು:ಲಾಕ್​​ಡೌನ್ ವೇಳೆ‌ ಸಂಚಾರಿ ನಿಯಮ ಉಲ್ಲಂಘಿಸಿದರೆ ಪೊಲೀಸರು ದಂಡ ಹಾಕುವುದಿಲ್ಲ ಎಂದು ನಿವೇನಾದರೂ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅಗತ್ಯ ವಸ್ತು ಹಾಗೂ ತುರ್ತು ಸೇವೆ ನೆಪದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಿಜಿಟಲ್ ಕ್ಯಾಮೆರಾ ಮೂಲಕ ಸೆರೆ ಹಿಡಿದು ಪ್ರಕರಣ ದಾಖಲಿಸಿ ದಂಡ ವಿಧಿಸಲು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಓದಿ: ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದವನಿಗೆ ಬಿತ್ತು ಭಾರೀ ದಂಡ!

ನಗರದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ಲಾಕ್​ಡೌನ್ ವಿಧಿಸಿದೆ. ಕಳೆದೊಂದು ತಿಂಗಳಿಂದ ಈ‌ ನಿಯಮ ಜಾರಿ ಹಿನ್ನೆಲೆಯಲ್ಲಿ ಅಗತ್ಯ ಸೇವೆ ನೀಡುವ ವಾಹನ ಹೊರತುಪಡಿಸಿ ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ರಸ್ತೆಯಲ್ಲಿ ಭೌತಿಕವಾಗಿ ತಡೆದು ದಂಡ ವಿಧಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ಲಾಕ್​​ಡೌನ್ ಅವಧಿಯಲ್ಲಿಯೂ ಅಗತ್ಯ ಸೇವೆ ಖರೀದಿ ಸೋಗಿನಲ್ಲಿ ವಾಹನ ಸವಾರರು ಟ್ರಾಫಿಕ್ ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನೆಲೆ, ದಂಡ ವಿಧಿಸಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಕಂಡು ಬಂದರೆ ಎಫ್​​ಟಿವಿಆರ್ (ಡಿಜಿಟಲ್ ಕ್ಯಾಮೆರಾ) ಹಾಗೂ ನಗರದ ಸಿಗ್ನಲ್​​​​ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ‌ ಸೆರೆಯಾಗುವ ಉಲ್ಲಂಘನೆಗಳನ್ನು ವಾಹನದ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ‌. ಕಳೆದ ವರ್ಷ ಲಾಕ್​ಡೌನ್ ವೇಳೆಯೂ ಉಲ್ಲಂಘನೆ ಪ್ರಕರಣ ತಗ್ಗಿಸಿ ದಂಡ ವಸೂಲಿ ಮಾಡಲು ಡಿಜಿಟಲ್ ಕ್ಯಾಮೆರಾಗಳ ಮೊರೆ ಹೋಗಿದ್ದರು.

ABOUT THE AUTHOR

...view details