ಬೆಂಗಳೂರು :ನಗರದಲ್ಲಿ ಕಳೆದ ಕೆಲ ದಿನಗಳಿಂದ ಹಗಲು ಬಿಸಿಲು, ರಾತ್ರಿ ಮಳೆ ಸುರಿಯುತ್ತಿದೆ. ನಗರದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ತರಕಾರಿ ಬೆಲೆ ಏರಿಕೆ ಆಗುತ್ತಲೆ ಇದೆ. ಮಳೆ ಬಂದರೆ ತರಕಾರಿ ಬೆಲೆ ಹೆಚ್ಚಾಗುತ್ತೆ ಅಂತಾರೆ ತಳ್ಳುವ ಗಾಡಿ ವ್ಯಾಪಾರಸ್ಥರು.
ಮಳೆ ಇಲ್ಲವೆಂದರೆ ತರಕಾರಿ ಬೆಲೆ ಕಡಿಮೆ ಆಗುತ್ತೆ. ಮಳೆ ಬಂದರೆ ಎಲ್ಲ ತರಕಾರಿಗಳ ಬೆಲೆಯೂ ಏರಿಕೆ ಆಗುತ್ತೆ ಅಂತಾ ತಳ್ಳುವ ಗಾಡಿ ವ್ಯಾಪಾರಸ್ಥರಾದ ರಾಣಿ ತಿಳಿಸಿದರು.
ತರಕಾರಿ ಬೆಲೆ ಹಾಗೂ ವ್ಯಾಪಾರದ ಕುರಿತು ಮಾತಾನಾಡಿರುವ ತಳ್ಳುವ ಗಾಡಿ ವ್ಯಾಪಾರಸ್ಥರಾದ ರಾಣಿ, ಎಲ್ಲ ತರಕಾರಿಯನ್ನ ಕಲಾಸಿಪಾಳ್ಯದಿಂದ ತಂದು ಮಾರುತ್ತೇವೆ. ಸದ್ಯಕ್ಕೆ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಸೌತೆಕಾಯಿ ಬಿಟ್ಟರೆ ಬೇರೆ ಎಲ್ಲ ತರಕಾರಿ, ಸೊಪ್ಪಿನ ಬೆಲೆ ಜಾಸ್ತಿ ಇದೆ.
ಜನರು ಕಡಿಮೆ ಬೆಲೆಗೆ ಕೊಡಿ ಅಂತಾ ಚೌಕಾಸಿ ಮಾಡ್ತಾರೆ, ಏನ್ ಮಾಡೋದು. ಮಳೆ ಬಂದರೆ ತರಕಾರಿ ಕೊಳೆಯುತ್ತೆ. ಅದನ್ನ ಜಾಸ್ತಿ ದಿನ ಇಟ್ಟಕೊಳ್ಳಲು ಸಹ ಆಗಲ್ಲ ಎಂದು ಸಂಕಟ ತೋಡಿಕೊಂಡರು.
ದುಬಾರಿಯಾಗಿರುವ ತರಕಾರಿಯ ಖರೀದಿ ಸಹವಾಸಕ್ಕೆ ನಾವೇ ಹೋಗಿಲ್ಲ. ಬಟಾಣಿ ಕೆಜಿ 300 ರೂ. ಇದ್ದು, ಇದರಲ್ಲಿ ಫಾರಮ್ 180 ರೂ. ಹಾಗೂ ಚೆನ್ನಾಗಿರುವ ಬಟಾಣಿ ಬೆಲೆ 200 ರೂ ಇದೆ. ಇದನ್ನು ಸಂಗ್ರಹಿಸುವುದು ಕಷ್ಟ.
ಹೀಗಾಗಿ, ಇದನ್ನೆಲ್ಲ ಸದ್ಯಕ್ಕೆ ತಂದು ಮಾರುತ್ತಿಲ್ಲ ಅಂದರು. ನಿನ್ನೆ ಇರುವ ಬೆಲೆ ಇವತ್ತು ಇರಲ್ಲ. ಬಂಡವಾಳ ಹಾಕಿ ತರಕಾರಿ ತರುತ್ತೇವೆ. ಆದರೆ, ಹೆಚ್ಚಿನ ಲಾಭವೇ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇವತ್ತಿನ ತರಕಾರಿ ಬೆಲೆ ಹೇಗಿದೆ?:
ತರಕಾರಿ | ತಳ್ಳುವ ಗಾಡಿ ದರ |