ಬೆಂಗಳೂರು: ಕೊರೊನಾ ವೈರಸ್ ಬೆಂಬಿಡದೆ ಕಾಡುತ್ತಿದ್ದು, ಮಹಾನಗರದಲ್ಲಿ 54 ವರ್ಷದ ಸೋಂಕಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ 88 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಒಬ್ಬರು ಹೈ ಶುಗರ್ ನಿಂದ ಇನ್ನೊಬ್ಬರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊರೊನಾಗೆ ಬಲಿ...! - ಕೋವಿಡ್-19
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದ್ವಿಗುಣವಾಗುತ್ತಿದ್ದು, ಬೆಂಗಳೂರಿನಲ್ಲಿಂದು 54 ವರ್ಷದ ಸೋಂಕಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ 88 ವರ್ಷದ ಸೋಂಕಿತ ವೃದ್ಧ ಮೃತಪಟ್ಟಿದ್ದಾರೆ.
ಹೈ ಶುಗರ್ ನಿಂದ ಬಳಲುತ್ತಿದ್ದ 54 ವರ್ಷದ ಸೋಂಕಿತ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಕಾಚರಕನಹಳ್ಳಿಯ 88 ವರ್ಷದ ವೃದ್ಧನ ಸ್ವಾಬ್ ಟೆಸ್ಟ್ನ್ನು ಜುಲೈ 1 ರಂದು ಮಾಡಲಾಗಿತ್ತು. ಜುಲೈ 2 ರಂದು ಬಂದ ರಿಪೋರ್ಟ್ನಲ್ಲಿ ಸೋಂಕು ತಗುಲಿರುವುದು ದೃಢವಾಗಿತ್ತು.
ಸೋಂಕಿತ ವೃದ್ಧನನ್ನು ಸ್ಥಳೀಯ ಆರೋಗ್ಯಾಧಿಕಾರಿಗಳ ಅನುಮತಿ ಇಲ್ಲ ಎಂದು ಸರ್ಕಾರ ನಿಗದಿಪಡಿಸಿದ್ದ ವಿಕ್ರಂ ಆಸ್ಪತ್ರೆ ಮತ್ತು ಜನಪ್ರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವೃದ್ಧನ ಮಗ ಅವರನ್ನು ಮನೆಗೆ ಕರೆದುಕೊಂಡು ಬಂದಾಗ, ಚಿಕಿತ್ಸೆಗೆ ವ್ಯವಸ್ಥೆ ಮಾಡುವಷ್ಟರಲ್ಲಿ ಮೃತಪಟ್ಟಿದ್ದಾರೆ.