ಕರ್ನಾಟಕ

karnataka

By

Published : May 6, 2019, 7:20 PM IST

ETV Bharat / city

ಈ ಬಾರಿ ಹಿಂಗಾರು , ಬೇಸಿಗೆ ಬೆಳೆಯಲ್ಲಿ ತೀವ್ರ ಕುಸಿತ: ಉತ್ಪಾದನೆಯಲ್ಲಾದ ಇಳಿಕೆ ಎಷ್ಟು?

ಈ ಬಾರಿ ರಾಜ್ಯವನ್ನು ಬರಗಾಲ ಬೆನ್ನತ್ತಿದೆ. ಹೀಗಾಗಿ ಹಿಂಗಾರು ಹಾಗೂ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಂಡಿದೆ.

ಉತ್ಪಾದನೆಯಲ್ಲಿ ಕುಸಿತ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ‌ ಎದುರಾದ ಹಿನ್ನೆಲೆ ಹಿಂಗಾರು ಹಾಗೂ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಂಡಿದೆ.

ಗದಗ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ ಹಾಗೂ ವಿಜಯಪುರದಲ್ಲಿ ಬಿತ್ತನೆಯಾದ ಹಿಂಗಾರಿನ ಜೋಳ ಹಾಗೂ ಕಡಲೆ ಬೆಳೆಗಳು ತೇವಾಂಶ ಕೊರತೆಯಿಂದ ನಾಶವಾಗಿದೆ. ಬರದ ಹಿನ್ನೆಲೆ ಬೆಳೆಯಲ್ಲಿ ಕುಸಿತ ಕಂಡ ಕಾರಣ ಆಹಾರ ಧಾನ್ಯ ಉತ್ಪಾದನೆಯಲ್ಲೂ ಸುಮಾರು 20% ಇಳಿಕೆ ಕಂಡಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್​ ತಿಳಿಸಿದ್ದಾರೆ.

ಹಿಂಗಾರಿನ ಪ್ರಮುಖ‌ ಬೆಳೆಯಾದ ಬೇಳೆ ಕಾಳು ಉತ್ಪಾದನೆ ನೆಲ ಕಚ್ಚಿದೆ. ಹಿಂಗಾರು ಮಳೆ‌ ಕೈಕೊಟ್ಟ ಕಾರಣ 2017-18ಕ್ಕೆ ಹೋಲಿಸಿದರೆ 2018-19ರ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಾಣುವಂತಾಗಿದೆ. 2018- 19 ರಲ್ಲಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 31.80 ಲಕ್ಷ ಹೆಕ್ಟೇರ್ ಇತ್ತು.ಅದರಲ್ಲಿ 27.89 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಸಾಧ್ಯವಾಗಿದೆ.ಅಂದರೆ ಶೇ.88 ರಷ್ಟು ಮಾತ್ರ ಬಿತ್ತನೆ ಆಗಿದೆ. 2017-18ನೇ ಸಾಲಿನಲ್ಲಿ ಇದೇ ಅವಧಿಗೆ 30.47 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿತ್ತು.

ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್​

2018-19 ಸಾಲಿನ‌ ಬೇಸಿಗೆ ಹಂಗಾಮು (ಡಿಸೆಂಬರ್-ಮಾರ್ಚ್)ನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5.41 ಲಕ್ಷ ಹೆಕ್ಟೇರ್ ಇಡಲಾಗಿತ್ತು. ಆದರೆ, ವಾಸ್ತವದಲ್ಲಿ ಕೇವಲ‌ 2.81 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಒಟ್ಟು 26.55 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿತ್ತು.ಆದರೆ, ತೀವ್ರ ಬರದ ಹಿನ್ನೆಲೆ ಉತ್ಪಾದನೆಯಲ್ಲಿ ಕುಸಿತ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details