ಬೆಂಗಳೂರು:ಲಾಕ್ಡೌನ್ ನಡುವೆಯೂ ಕಳ್ಳರು ಕರಾಮತ್ತು ತೋರಿಸಿರುವ ಘಟನೆ ನಗರದ ಭಾರತೀ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲಾಕ್ಡೌನ್ ನಡುವೆಯೂ ಬಾಟಾ ಶೋರೂಂನಲ್ಲಿ ಕಳ್ಳರ ಕರಾಮತ್ತು.. - Bangalore crime news
ಸದ್ಯ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.
ಬಾಟಾ ಶೋರೂಂನಲ್ಲಿ ಕಳ್ಳತನ
ಭಾರತಿನಗರ ಠಾಣಾ ವ್ಯಾಪ್ತಿಯ ಬಳಿಯ ಬಾಟಾ ಶೋರೂನಲ್ಲಿ ಕಳ್ಳರು ತಡರಾತ್ರಿ ರಾತ್ರಿ ಎಂಟ್ರಿ ಕೊಟ್ಟು ಬೀಗ ಮುರಿದು ಶೋರೂಂನಲ್ಲಿದ್ದ ಬರೋಬ್ಬರಿ 8 ಲಕ್ಷ ರೂಪಾಯಿ ಮೌಲ್ಯದ ಬ್ರ್ಯಾಂಡೆಡ್ ಚಪ್ಪಲಿಗಳು ಹಾಗೂ ಹಣದ ಪೆಟ್ಟಿಗೆ ಸಮೇತ ಪರಾರಿಯಾಗಿದ್ದಾರೆ.
ಲಾಕರ್ನಲ್ಲಿ ಹಣ ಇದ್ದು, ಅದನ್ನ ಒಡೆಯಲು ಸಾಧ್ಯವಾಗದೆ ಕೈಗೆ ಸಿಕ್ಕ ಹಣ, ಸಾಮಾನುಗಳನ್ನ ದೋಚಿ ಪರಾರಿಯಾಗಿದ್ದಾರೆ. ಸದ್ಯ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.