ಕರ್ನಾಟಕ

karnataka

ETV Bharat / city

ಸಿಲಿಕಾನ್​ ಸಿಟಿಯಲ್ಲಿ 31 ಜ್ವರ ಪರೀಕ್ಷಾ ಕೇಂದ್ರ ಆರಂಭ: ಸಚಿವ ಸುಧಾಕರ್ - ಕೊರೊನಾ ಸೋಂಕು

ಕೊರೊನಾ ವೈರಸ್​ ರಾಜ್ಯದಲ್ಲಿ ಭೀತಿ ಹುಟ್ಟಿಸಿರುವ ಹಿನ್ನೆಲೆ ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ, ನೆಗಡಿ, ಕೆಮ್ಮು ಬಂದರೂ ಸಹ ಜನರು ಕೊರೊನಾ ಎಂದು ಆತಂಕ ಪಡುತ್ತಿರುವ ಹಿನ್ನೆಲೆ ಬೆಂಗಳೂರು ಮಹಾನಗರದಲ್ಲಿ ಜ್ವರ ಚಿಕಿತ್ಸೆಗಾಗಿಯೇ 31 ಫೀವರ್ ಕ್ಲಿನಿಕ್​ ಆರಂಭಿಸಲಾಗುತ್ತಿದೆ.

the-start-of-31-flu-testing-centers-in-silicon-city-sudhakar
ಸಚಿವ ಸುಧಾಕರ್

By

Published : Mar 26, 2020, 6:20 PM IST

ಬೆಂಗಳೂರು:ಕೊರೊನಾ ಸೋಂಕಿತರು ಹೆಚ್ಚಾಗಿರುವ ಹಿನ್ನೆಲೆ ನಗರದಲ್ಲಿ ಜ್ವರ ಬಂದವರ ತಪಾಸಣೆಗಾಗಿ 31 'ಫೀವರ್ ಕ್ಲಿನಿಕ್'​ಗಳನ್ನು ಆರಂಭಿಸಲಾಗುತ್ತದೆ. ಕೊರೊನಾ ಅಲ್ಲದೆ ಸಾಮಾನ್ಯ ನೆಗಡಿ, ಶೀತ ಬಂದವರು ಈ ಕ್ಲಿನಿಕ್​ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

ಜ್ವರ, ನೆಗಡಿ, ಶೀತ ಇದ್ದವರಿಗೆಲ್ಲಾ ಕೊರೊನಾ ಬಂದಿದೆ ಎಂದು ಅರ್ಥವಲ್ಲ. ಅದಕ್ಕಾಗಿ ಸಾಮಾನ್ಯ ಜ್ವರದಿಂದ ಬಳಲುತ್ತಿರುವವರ ತಪಾಸಣೆಗಾಗಿ "ಫೀವರ್ ಕ್ಲಿನಿಕ್"ಗಳನ್ನು ಆರಂಭಿಸಲಾಗುತ್ತದೆ. ಜ್ವರ ಬಂದವರನ್ನು ಮೊದಲು ಇಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಗುಣವಾದರೆ ಸರಿ, ಇಲ್ಲವಾದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಒಂದೆರಡು ದಿನಗಳಲ್ಲಿ ಫೀವರ್ ಕ್ಲಿನಿಕ್​​ಗಳನ್ನು ಆರಂಭಿಸಲಾಗುತ್ತದೆ. ಬಿಬಿಎಂಪಿ ಆಯುಕ್ತರು, ಆರೋಗ್ಯ ಇಲಾಖೆಯವರು ಇವುಗಳ ನಿರ್ವಹಣೆ ಮಾಡುತ್ತಾರೆ. ನಂತರ ಅಗತ್ಯ ಕಂಡುಬಂದಲ್ಲಿ ರಾಜ್ಯದ ಇತರೆಡೆಗಳಲ್ಲಿಯೂ ಸಹ ಪ್ರಾರಂಭಿಸಲು ಯೋಚಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ABOUT THE AUTHOR

...view details