ಕರ್ನಾಟಕ

karnataka

ETV Bharat / city

1 ನಿಮಿಷದಲ್ಲಿ 21 ಬೇಸ್​​ ಬಾಲ್​ ಬ್ಯಾಟ್​ ಮುರಿದು ಕನ್ನಡಿಗನಿಂದ ರಾಷ್ಟ್ರೀಯ ದಾಖಲೆ

ಕಿಕ್ ಬಾಕ್ಸಿಂಗ್​ನಲ್ಲಿ ಕೂಡ ಇವರು ಎತ್ತಿದ ಕೈ. ರಾಷ್ಟ್ರಮಟ್ಟದಲ್ಲಿ 14 ಬಾರಿ ಚಾಂಪಿಯನ್ ಆಗಿರುವ ಪುನೀತ್ ರೆಡ್ಡಿ, ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ..

ಬೇಸ್​​ ಬಾಲ್​ ಬ್ಯಾಟ್​
ಬೇಸ್​​ ಬಾಲ್​ ಬ್ಯಾಟ್​

By

Published : Feb 8, 2021, 10:11 PM IST

Updated : Feb 8, 2021, 10:21 PM IST

ಬೆಂಗಳೂರು :ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಒಂದು ನಿಮಿಷದೊಳಗೆ 21 ಬೇಸ್ ಬಾಲ್ ಬ್ಯಾಟ್ ಮುರಿಯುವ ಮೂಲಕ ಮಾರ್ಷಲ್ ಆರ್ಟ್ಸ್​ ಪಟು ಪುನೀತ್ ರೆಡ್ಡಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ಕಿಕ್ ಬಾಕ್ಸಿಂಗ್ ಇನ್ಸ್‌ಟಿಟ್ಯೂಟ್ ಮಾರ್ಷಲ್ ಆರ್ಟ್ಸ್​ನ ಪಟು ಪುನೀತ್ ರೆಡ್ಡಿ, ಥಾಯ್‌ಲ್ಯಾಂಡ್ ಕಲೆಯಾದ ಬೇಸ್ ಬಾಲ್ ಬ್ಯಾಟ್ ಬ್ರೇಕಿಂಗ್‌ನಲ್ಲಿ ಒಂದು ನಿಮಿಷದೊಳಗೆ 21 ಬೇಸ್ ಬಾಲ್ ಬ್ಯಾಟ್ ಮುರಿಯುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ.

ಈ ದಾಖಲೆ ಮಾಡಿರುವುದಕ್ಕೆ ಇಂಡಿಯನ್ ವರ್ಲ್ಡ್ ರೆಕಾರ್ಡ್ಸ್‌ ಅಸೋಸಿಯೇಷನ್, ಪುನೀತ್ ರೆಡ್ಡಿಗೆ ಚಿನ್ನದ ಪದಕ, ಪ್ರಶಸ್ತಿ ನೀಡಿ ಗೌರವಿಸಿದೆ.

21 ಬೇಸ್​​ ಬಾಲ್​ ಬ್ಯಾಟ್​ ಮುರಿದು ರಾಷ್ಟ್ರೀಯ ದಾಖಲೆ..

ಇಷ್ಟು ಮಾತ್ರವಲ್ಲದೆ ಕಿಕ್ ಬಾಕ್ಸಿಂಗ್​ನಲ್ಲಿ ಕೂಡ ಇವರು ಎತ್ತಿದ ಕೈ. ರಾಷ್ಟ್ರಮಟ್ಟದಲ್ಲಿ 14 ಬಾರಿ ಚಾಂಪಿಯನ್ ಆಗಿರುವ ಪುನೀತ್ ರೆಡ್ಡಿ, ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಆಸೆ ನನಗಿದೆ. ಆದರೆ, ಸರ್ಕಾರದಿಂದ ಕ್ರೀಡಾಪಟುಗಳಿಗೆ, ಸಾಧನೆ ಗೈದವರಿಗೆ ಯಾವುದೇ ಸಹಾಯ ಬರುತ್ತಿಲ್ಲ ಎಂದು ಪುನೀತ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Feb 8, 2021, 10:21 PM IST

ABOUT THE AUTHOR

...view details