ಕರ್ನಾಟಕ

karnataka

By

Published : Apr 10, 2022, 9:55 PM IST

ETV Bharat / city

ಮರಳಿ ತೀರ್ಥಹಳ್ಳಿಗೆ ಅಭಿಯಾನ ಕೈಗೊಳ್ಳಿ: ಮುಖ್ಯಮಂತ್ರಿ ಬೊಮ್ಮಾಯಿ ಕರೆ

ಅರಮನೆ ಮೈದಾನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳಿಗಾಗಿ ಆಯೋಜಿಸಿದ್ದ ಮಲೆನಾಡಿಗರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Chief Minister Basavaraja Bommai
ಮಲೆನಾಡಿಗರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿ

ಬೆಂಗಳೂರು: ನಿಮ್ಮ ಲಕ್ಷ್ಯ ನಿಮ್ಮ ಮಣ್ಣಿಗೆ ಸಲ್ಲಬೇಕು. ನಿಮ್ಮ ಮಣ್ಣಿನ ಗಿಡಕ್ಕೆ, ಊರಿನ ನೆಲಕ್ಕೆ, ಕಲಿತ ಶಾಲೆಗೆ, ತಾಂದೆತಾಯಿಗಳಿದ್ದ ಮನೆಗೆ ನ್ಯಾಯ ನೀಡಲು ಮರಳಿ ತೀರ್ಥಹಳ್ಳಿಗೆ ಎಂಬ ಅಭಿಯಾನವನ್ನು ಕೈಗೊಳ್ಳಬೇಕೆಂದು ಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಅರಮನೆ ಮೈದಾನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳಿಗಾಗಿ ಆಯೋಜಿಸಿದ್ದ ಮಲೆನಾಡಿಗರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಪರಿಸರವುಳ್ಳ ವಿಶಿಷ್ಟ ಜಿಲ್ಲೆ. ರಾಜ್ಯಕ್ಕೆ ಸಾಹಿತಿಗಳನ್ನು ರಾಜಕಾರಣಿಗಳನ್ನು ನೀಡಿದ ಜಿಲ್ಲೆ ಎಂದರು.

ವಿಐಎಸ್ಎಲ್ ಪುನಶ್ಚೇತನಕ್ಕೆ ಚಿಂತನೆ:ಪೇಪರ್ ಮಿಲ್ ಹಾಗೂ ವಿಐಎಸ್​ಎಲ್​ ಜಾಗತೀಕರಣದಿಂದ ಮುಚ್ಚುವ ಪರಿಸ್ಥಿತಿ ಬಂದಿದೆ. ಅಲ್ಲಿನ ನೌಕರರಿಗೆ ಯಾವುದೇ ತೊಂದರೆಯನ್ನು ಕೊಡದೇ ವಿಐಎಸ್‍ಎಲ್​ನ್ನು ಖಾಸಗಿಯವರ ಮೂಲಕ ಪುನಶ್ಚೇತನ ಮಾಡಬೇಕೆಂಬ ಚಿಂತನೆ ನಡೆದಿದೆ, ಬರುವ ದಿನಗಳಲ್ಲಿ ಶುಭ ಸುದ್ದಿ ಶಿವಮೊಗ್ಗದ ಜನತೆಗೆ ಸಿಗಲಿದೆ ಎಂದರು.


ಶಿವಮೊಗ್ಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣ ತಲೆ ಎತ್ತುತ್ತಿದೆ. ಜೋಗ ಜಲಪಾತದಲ್ಲಿಯೂ ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿತಾಣವಾಗಿ ಅಭಿವೃದ್ಧಿಯಾಗುತ್ತಿದೆ. 270 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಈ ಉದ್ದೇಶಕ್ಕಾಗಿ ಅನುಮೋದಿಸಲಾಗುತ್ತಿದೆ. ರೋಪ್ ವೇ ಮತ್ತು ಇನ್ನಿತರೆ ವ್ಯವಸ್ಥೆಗಳಾಗುತ್ತಿದೆ ಎಂದರು.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಆರಗ ಜ್ಞಾನೇಂದ್ರ ಮತ್ತೆ ಮತ್ತೆ ಶಾಸಕರಾಗಿ ಬರುತ್ತಾರೆ. ಶಿವಮೊಗ್ಗ ಜಿಲ್ಲೆಯ ಪ್ರತಿ ಕ್ಷೇತ್ರದಿಂದ ಐದು ಸಾವಿರ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚುನಾವಣೆ ಸಮಯದಲ್ಲಿ ಇಲ್ಲಿರೋರು ಬಂದು ಮತ ಹಾಕುತ್ತಿದ್ದಾರೆ. ಇದರಿಂದ ವಿಪಕ್ಷಗಳು ಬೆಚ್ಚಿ ಬಿದ್ದಿವೆ ಎಂದರು.

ಇದನ್ನೂ ಓದಿ:ನವವೃಂದಾವನ ಗಡ್ಡಿಯಲ್ಲಿ ಮಾರ್ದನಿಸಿದ ರಾಮನಾಮ

ABOUT THE AUTHOR

...view details