ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ, ಹುಡುಗಿ ಜೊತೆ ಹೋದ ಕೇಸ್ ಇಲ್ಲ, ಕೊಲೆ ಮಾಡಿದ ಯಾವುದೇ ಪ್ರಕರಣ ಇಲ್ಲವೆಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾರದೇ ಹತ್ಯೆ ಆದ್ರೂ ಎಲ್ಲಾ ಪಕ್ಷ ಹೇಳೋದು ಕೊಲೆಗಡುಕರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು. ಎಲ್ಲಾ ಪಕ್ಷಗಳು ಹೇಳಿದ್ದು ಅದೇ. ಹರ್ಷ ಅವರು ಈ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಹರ್ಷ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿರುವುದರಿಂದ ನನಗೆ ಬಹಳ ಪರಿಚಯ ಇದೆ. ಈಗ ಅವರ ಮೇಲೆ ಅನೇಕ ಕೇಸ್ ಇವೆ ಎಂದು ಹೇಳಲಾಗುತ್ತಿದೆ. ಆದರೆ ಹರ್ಷ ಮೇಲೆ ಯಾವುದೇ ವೈಯಕ್ತಿಕ ಕೇಸ್ ಇಲ್ಲ, ಗಾಂಜಾ ಕೇಸ್ ಇಲ್ಲ, ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ. ಹರ್ಷ ಅವರ ಮೇಲೆ ಹೆಣ್ಣು ಮಕ್ಕಳನ್ನು ಹಾರಿಸಿಕೊಂಡು ಹೋದ ಕೇಸಿಲ್ಲ ಎಂದು ಹೇಳಿದ್ದಾರೆ. ಕೇವಲ ಗಣೇಶ ಮೂರ್ತಿ ಕೂರಿಸೋ ಬಗ್ಗೆ ಮಾತ್ರ ಕೇಸ್ ಇರೋದು ಎಂದು ಅವರು ಹೇಳಿದ್ದಾರೆ.