ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಅವರ ಸದಾಶಿವನಗರದ ಮನೆ ಮುಂದೆಯೇ ಇಬ್ಬರ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.
ಸಚಿವ ಕೆ.ಸುಧಾಕರ್ ಮನೆ ಮುಂದೆಯೇ ಸಿಬ್ಬಂದಿ ನಡುವೆ ಮಾರಾಮಾರಿ: ವಿಡಿಯೋ - staff fight in front of the minister sudhakar house
ಸಚಿವ ಸುಧಾಕರ್ ಅವರ ಗನ್‌ಮ್ಯಾನ್ ತಿಮ್ಮಯ್ಯ ಎಂಬುವರು ಖಾಸಗಿ ಡ್ರೈವರ್ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಮತ್ತು ಸ್ಥಳೀಯರು ಜಗಳ ಬಿಡಿಸಿದ್ದಾರೆ.
ಸಚಿವ ಡಾ. ಕೆ.ಸುಧಾಕರ್ ಮನೆ ಮುಂದೆ ಸಿಬ್ಬಂದಿ ನಡುವೆ ಗಲಾಟೆ
ಸುಧಾಕರ್ ಅವರ ಗನ್‌ಮ್ಯಾನ್ ತಿಮ್ಮಯ್ಯ ಎಂಬುವರು ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸೋಮಶೇಖರ್ ಅವರು ಸಚಿವರ ಮನೆಯ ಖಾಸಗಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಕಳೆದ ಎರಡು ದಿನಗಳ ಹಿಂದೆ ಟೀ ಮಾರುವವನಿಗೆ ಹೊಡೆದು ಗನ್‌ಮ್ಯಾನ್ ಮೇಲೆ ಹಲ್ಲೆ ಮಾಡಿದ್ದ. ಈ ಹಲ್ಲೆ ವಿಷಯವನ್ನು ಸಚಿವರಿಗೆ ಚಾಲಕ ಸೋಮಶೇಖರ್ ತಿಳಿಸಿದ್ದಾನೆ. ಇದರಿಂದಾಗಿ ಕುಪಿತಗೊಂಡ ಗನ್‌ಮ್ಯಾನ್ ತಿಮ್ಮಯ್ಯ, ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
Last Updated : Mar 19, 2021, 10:42 AM IST