ಕರ್ನಾಟಕ

karnataka

ETV Bharat / city

ಹಿಂದೆ ನಾವು ಉಪಚುನಾವಣೆ ಗೆದ್ದಿದ್ದೆವಲ್ಲ, ಆಗ ಬಿಜೆಪಿ ಏನಾದ್ರು ಮುಳುಗಿ ಹೋಗಿತ್ತಾ?: ಸಿದ್ದರಾಮಯ್ಯ ಕಿಡಿ - ಉಪಚುನಾವಣೆ 2020

ಯಾವಾಗಲೂ ಅಧಿಕಾರ ಇದ್ದ ಪಕ್ಷ ಗೆಲ್ಲುತ್ತದೆ. ಹಿಂದೆ ನಾವು ಉಪಚುನಾವಣೆ ಗೆದ್ದಿದ್ದೆವಲ್ಲ. ಆಗ ಬಿಜೆಪಿ ಏನಾದ್ರೂ ಮುಳುಗಿ ಹೋಗಿತ್ತಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗರ ವಿರುದ್ಧ ಕಿಡಿ ಕಾರಿದರು.

siddaramaiah-statement-on-byelection-defeat
ಸಿದ್ದರಾಮಯ್ಯ

By

Published : Nov 12, 2020, 3:20 PM IST

ಬೆಂಗಳೂರು: ಹಿಂದೆ ನಾವು ಉಪ ಚುನಾವಣೆ ಗೆದ್ದಿದ್ದೆವಲ್ಲ. ಆಗ ಬಿಜೆಪಿ ಏನಾದರೂ ಮುಳುಗಿ ಹೋಗಿತ್ತಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಉಪ ಚುನಾವಣೆ ಸೋಲಿನ ಕುರಿತು ಮಾತನಾಡಿದ ಅವರು, ಯಾವಾಗಲು ಅಧಿಕಾರ ಇದ್ದ ಪಕ್ಷ ಗೆಲ್ಲುತ್ತದೆ. ನಮಗೆ ಯಶವಂತಪುರದಲ್ಲಿ ರೌಡಿ ಅಡ್ಡ ಹಾಕಲಿಲ್ವಾ?. ಪೊಲೀಸರು ಸುಮ್ಮನೆ ನೋಡ್ತಾ ಇರಲಿಲ್ವಾ? ಎಂದು ಕಿಡಿಕಾರಿದರು.

ಹೆಣ್ಣುಮಗಳ ಮೇಲೆ ಬಿಜೆಪಿ ಶಾಸಕ ಸಿದ್ದು ಸವದಿ ಬೆಂಬಲಿಗರ ಅಟ್ಯಾಕ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಬ್ಬ ಶಾಸಕನಾಗಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದು ಸರಿಯೇ?‌. ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದು ಅಪರಾಧ. ನೀವೆಲ್ಲರೂ ವಿಡಿಯೋ ಕ್ಲಿಪ್ಪಿಂಗ್ಸ್​​ ನೋಡಿದ್ದೀರಿ. ಶಾಸಕನೇ ಹಿಡ್ಕೊಂಡು ಎಳೀತಾನೆ‌. ಹೆಣ್ಣುಮಕ್ಕಳ ಮೇಲೆ ಇಂತ ದೌರ್ಜನ್ಯ‌ ಮಾಡಿದ್ದಾರೆ. ಹೆದರಿಸಿ ಬೆದರಿಸಿ ವೋಟ್ ಹಾಕಿಸಿಕೊಳ್ತಾರೆ. ನಾವು ಸುಸಂಸ್ಕೃತರು ಅಂತ ಬಿಜೆಪಿಯವರು ಹೇಳ್ತಾರೆ. ಇದೇನಾ ಬಿಜೆಪಿಯವರ ಸಂಸ್ಕೃತಿ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ಪಕ್ಷ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದೆ ಎಂದರು.

ಪೊಲೀಸರು ಇರೋದು ಯಾಕೆ..?

ಸಂಪತ್ ರಾಜ್ ತಲೆ ಮರೆಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಪತ್ ರಾಜ್ ಬಚ್ಚಿಟ್ಟುಕೊಂಡಿದ್ದಾರೆ ಅಂತಾರೆ. ಪೊಲೀಸರು ಇರೋದು ಯಾಕೆ?. ಸರ್ಕಾರ ಇರೋದು ಯಾಕೆ?. ಪೊಲೀಸರು ಎಲ್ಲಿದ್ದಾರೆ?. ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳೋದಲ್ಲ. ಎಲ್ಲಿದ್ದಾರೆ ಅಂತ ಟ್ರೇಸ್ ಔಟ್ ಮಾಡಬೇಕು. ಅವರನ್ನು ಪತ್ತೆ ಹಚ್ಚಬೇಕು. ಪ್ರತಿಪಕ್ಷ ನಾಯಕರು ಪತ್ತೆ ಹಚ್ಚೋಕೆ ಆಗುತ್ತಾ?. ಕಾಂಗ್ರೆಸ್ ನವರು ಮಾಡಬೇಕಾ?. ಪೊಲೀಸರು ಅವರನ್ನು ಪತ್ತೆ ಹಚ್ಚಲಿ, ಆಗೋದಿಲ್ವಾ? ಎಂದು ಪ್ರಶ್ನಿಸಿದರು.

ABOUT THE AUTHOR

...view details