ಬೆಂಗಳೂರು:ವ್ಯಕ್ತಿಯೋರ್ವನಿಗೆ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ, ಆತಂಕಕ್ಕೆ ಒಳಗಾಗಿ ಸಂಬಂಧಿಕರ ಮನೆಗಳಿಗೆ ತೆರಳಿದ್ದ ಒಂದೇ ಅಪಾರ್ಟ್ಮೆಂಟ್ನ ನಾಲ್ಕು ಫ್ಲ್ಯಾಟ್ಗಳಿಗೆ ನುಗ್ಗಿದ ಖದೀಮರು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಹಾಗೂ ಪರವಾನಗಿ ಪಡೆದ ಪಿಸ್ತೂಲ್ ಕದ್ದು ಪರಾರಿಯಾಗಿದ್ದಾರೆ.
ಕೊರೊನಾಗೆ ಹೆದರಿ ಸಂಬಂಧಿಕರ ಮನೆಗಳಿಗೆ ತೆರಳಿದ್ದ ಫ್ಲ್ಯಾಟ್ಗಳಲ್ಲಿ ಸರಣಿ ಕಳ್ಳತನ - bangalore news
ಕೊರೊನಾಗೆ ಹೆದರಿ ಸಂಬಂಧಿಕರ ಮನೆಗಳಿಗೆ ತೆರಳಿದ್ದ ಒಂದೇ ಅಪಾರ್ಟ್ಮೆಂಟ್ನ ನಾಲ್ಕು ಫ್ಲ್ಯಾಟ್ಗಳಿಗೆ ನುಗ್ಗಿದ ಖದೀಮರು, ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಹಾಗೂ ಪರವಾನಗಿ ಪಡೆದ ಪಿಸ್ತೂಲ್ ಕದ್ದು ಪರಾರಿಯಾಗಿದ್ದಾರೆ.
ಭಾರತೀ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಸನ್ ಮ್ಯಾನ್ಷನ್ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ 27ರಂದು ಸರಣಿ ಮನೆಗಳ್ಳತನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಈ ಕಟ್ಟಡದ ಪಕ್ಕದ ಮನೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ಹೃದಯಾಘಾತದಿಂದ ಮುಜಾಫೀರ್ ಉಲ್ ರೆಹಮಾನ್ ಎಂಬುವರು ಸಾವನ್ನಪ್ಪಿದ್ದರು. ಇವರು ಕೊರೊನಾದಿಂದ ಸಾವನ್ನಪ್ಪಿದ್ದಾರೆಂದು ಹಲವರು ತಾವಿದ್ದ ಫ್ಲ್ಯಾಟ್ ತೊರೆದಿದ್ದರು.
ಈ ವಿಷಯ ತಿಳಿದ ಕಳ್ಳರು ಜುಲೈ 27ರ ರಾತ್ರಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ, ಮುನ್ನವರ್ ಎಂಬುವರರ ಫ್ಲ್ಯಾಟ್ನಲ್ಲಿದ್ದ 170 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ಕಳ್ಳತನ ಮಾಡಿದ್ದಾರೆ. ಮತ್ತೊಂದು ಪ್ಲಾಟ್ನಲ್ಲಿ 1 ಲಕ್ಷ ನಗದು 20 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಕಳವು ಮಾಡಿದ್ದಾರೆ. ಜೊತೆಗೆ ಹೃದಯಾಘಾತದಿಂದ ಮೃತಪಟ್ಟ ಮುಜಾಫೀರ್ ಅವರ ಲೈಸನ್ಸ್ ಗನ್ ಎಗರಿಸಿದ್ದಾರೆ. ನಾಲ್ಕು ಮನೆಗಳ ಪೈಕಿ 2 ಫ್ಲ್ಯಾಟ್ಗಳು ಬಹುತೇಕ ಖಾಲಿಯಾಗಿದ್ದವು. ಒಟ್ಟು 20 ಲಕ್ಷಕ್ಕೂ ಅಧಿಕ ಚಿನ್ನಾಭರಣ ದೋಚಿರುವ ಬಗ್ಗೆ ಮಾಹಿತಿ ತಿಳಿದಿದ್ದು, ಭಾರತಿ ನಗರ ಪೊಲೀಸರು ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.