ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ 10 ಲಕ್ಷ ರೂ. ಹಾಗೂ ಪೇಟಿಎಂ ವತಿಯಿಂದ 70 ಲಕ್ಷ ರೂ. ಗಳನ್ನು ಪರಿಹಾರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿತರಿಸಲಾಯಿತು.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪೇಟಿಎಂ, ಕೆಎಸ್ಸಿಎ ವತಿಯಿಂದ 80 ಲಕ್ಷ ರೂ. ಪರಿಹಾರ.. - North Karnataka flood
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಪೇಟಿಎಂ ವತಿಯಿಂದ ಪರಿಹಾರವನ್ನು ನೀಡಲಾಯಿತು.
ಪೇಟಿಎಂ, ಕೆಎಸ್ಸಿಎ ವತಿಯಿಂದ 80 ಲಕ್ಷ ರೂ. ಪರಿಹಾರ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಸ್ಸಿಎ ಪದಾಧಿಕಾರಿಗಳು ಹಾಗೂ ಪೇಟಿಎಂ ಅಧಿಕಾರಿಗಳು ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಈ ವೇಳೆ ಉಪಸ್ಥಿತರಿದ್ದರು. ಇಂದು ಭಾರತ - ಸೌತ್ ಆಫ್ರಿಕಾ ನಡುವಿನ ಮೂರನೆಯ ಟಿ 20 ಪಂದ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ವೀಕ್ಷಿಸುತ್ತಿದ್ದಾರೆ.