ಯಲಹಂಕ/ಬೆಂಗಳೂರು:ವಾಕಿಂಗ್ ಮಾಡುತ್ತಿದ್ದ ವೃದ್ಧೆಯರನ್ನ ಅಡ್ಡಗಟ್ಟಿದ ಬೈಕ್ ಸವಾರರು ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆಯ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಮೂರು ಬಾರಿ ಯತ್ನಿಸಿದರೂ ಚಿನ್ನದ ಸರ ಸಿಗದಿದ್ದಾಗ ಸರಗಳ್ಳರು ಪರಾರಿಯಾಗಿದ್ದಾರೆ. ವಿಫಲ ಸರಗಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್ನ ವಿಜಯಾ ಬಾರ್ ಹಿಂಭಾಗದ ಅಪಾರ್ಟ್ಮೆಂಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸೆ. 21ರ ಸೋಮವಾರದಂದು ಇಬ್ಬರು ವೃದ್ಧೆಯರು ವಾಕಿಂಗ್ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಇಬ್ಬರು ಹಿಂಬಾಲಿಸಿ ಕೊಂಡು ಬಂದಿದ್ದಾರೆ.