ಬೆಂಗಳೂರು: ಆಪ್ತರೊಬ್ಬರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಬೆಂಗಳೂರಿನ ಆಸ್ಪತ್ರೆಗೆ ರಜನಿಕಾಂತ್ ದಿಢೀರ್ ಭೇಟಿ: ತಲೈವಾ ನೋಡಲು ಮುಗಿಬಿದ್ದ ಅಭಿಮಾನಿಗಳು - ಅಪೋಲೊ ಖಾಸಗಿ ಆಸ್ಪತ್ರೆ
ಆಪ್ತರೊಬ್ಬರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿತು.

ರಜನಿಕಾಂತ್
ಬೆಂಗಳೂರಿಗೆ ಭೇಟಿ ನೀಡಿದ ರಜನಿಕಾಂತ್
ಹೌದು, ಸೂಪರ್ ಸ್ಟಾರ್ ಕಾಂತ್ ಅಣ್ಣ ಸತ್ಯನಾರಾಯಣ ರಾವ್ ಅನಾರೋಗ್ಯದ ಹಿನ್ನೆಲೆ ಬನ್ನೇರುಘಟ್ಟ ರಸ್ತೆಯ ಅಪೋಲೊ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದ್ದು, ಅಣ್ಣನ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ಬೆಂಗಳೂರಿಗೆ ಆಗಮಿಸಿದ್ದಾರೆ ಅನ್ನೋ ಮಾಹಿತಿ ಅಪ್ತ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ರಜನಿ ಕಾಂತ್ ದಿಢೀರ್ನೆ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾದ ಕಾರಣ ಅವರನ್ನು ಕಂಡು ಪುಳಕಿತರಾದ ಅಭಿಮಾನಿಗಳು, ತಲೈವನನ್ನು ನೋಡಲು ಮುಗಿಬಿದ್ದರು. ಅಲ್ಲದೇ ಜನರನ್ನು ಕಂಟ್ರೋಲ್ ಮಾಡಲು ಅಸ್ಪತ್ರೆಯಲ್ಲಿ ಸಿಬ್ಬಂದಿ ಪರದಾಡುವಂತಾಯಿತು.